ಯಮಕನಮರಡಿ: ಬೆಳಗಾವಿ ಜಿಲ್ಲೆಯ ಹತ್ತರಗಿ ಟೋಲ್ ಪ್ಲಾಜಾ ಬಳಿ ಸೆ.3ರ ಮಂಗಳವಾರ ರೈತ ಸಂಘಟನೆ ದಿಢೀರ್ ಪ್ರತಿಭಟನೆ ನಡೆಸಿ ರಸ್ತೆ ಮಾಡುವ ಗುತ್ತಿಗೆದಾರ ಹಾಗೂ ಟೋಲ್ ಶುಲ್ಕ ಪಡೆಯುವ ಗುತ್ತಿದಾರರ ವಿರುದ್ದ ಟೋಲ್‌ನ 12 ಗೇಟ್‌ಗಳ ತಡೆದು ಸುಮಾರು ಅರ್ಧ ಗಂಟೆಗೆ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪಾ ಪೂಜೇರಿ ಪತ್ರಕರ್ತರೊಂದಿಗೆ ಮಾತನಾಡಿ, ಕಳೆದ ಒಂದುವರೆ ವರ್ಷ ಕಳೆದರೂ ರಸ್ತೆ ದುರಸ್ತಿ ಮಾಡುತ್ತಿಲ್ಲ. ರಸ್ತೆಪಕ್ಕದಲ್ಲಿ ಕಚ್ಚಾ ರಸ್ತೆ ಸಹ ಸರಿಯಾಗಿಲ್ಲ. ಆದ್ದರಿಂದ ಸಾರ್ವಜನಿಕರು ತೊಂದರೆ ಎದುರಿಸುತ್ತಿದ್ದಾರೆ ಎಂದರು.
ಆದ್ದರಿಂದ ಇನ್ನು ಮುಂದೆ ರಸ್ತೆ ದುರಸ್ತಿ ಮಾಡುವ ವರೆಗೆ ಟೋಲ್ ಹಣ ಸಂದಾಯ ಮಾಡಿಕೊಳ್ಳಬಾರದು ಮತ್ತು ರೈತರ ವಾಹನಗಳಿಗೆ ತೆರಿಗೆ ಪಡೆದುಕೊಳ್ಳಬಾರದು ಎಂದರು.
ಈ ಪ್ರತಿಭಟನೆಯಲ್ಲಿ ರಾಜ್ಯ ಕಾರ್ಯಧ್ಯಕ್ಷ ರಾಜು ಪವಾರ, ಹುಕ್ಕೇರಿ ತಾಲೂಕು ಅಧ್ಯಕ್ಷ ಸಂಜು ಹವಣ್ಣವರ, ಹುಕ್ಕೇರಿ ತಾಲೂಕು ಬ್ಲಾಕ್ ಅಧ್ಯಕ್ಷ ರವೀಂದ್ರ ಚಿಕ್ಕೋಡಿ, ತಾಲೂಕು ಉಪಾಧ್ಯಕ್ಷ ಶಿವಲಿಂಗ ಪಾಟೀಲ, ಜಿಲ್ಲಾ ಸಂಚಾಲಕ ಶಿಂದೂರ ತೆಗ್ಗಿ, ಕೆಂಪಣ್ಣಾ ಬಿಸಿರೊಟ್ಟಿ, ಭರಮಾ ದುಬದಾಳಿ, ರಾವಸಾಹೇಬ ಪಾಟೀಲ, ಮಹಾವೀರ ಮಗದುಮ್ಮ, ಆನಂದ ಮಲಾಜಿ, ಮಲ್ಲಿಕಾರ್ಜುನ ಬಿಸಿರೊಟ್ಟಿ, ರವಿ ಮಲಕಾರ, ಮಹಾದೇವ ಮೋಕಾಶಿ, ಸಂತೋಷ ಮಲಾಜಿ, ಗೋಪಾಲ ಯರಗಟ್ಟಿ, ಪರಶುರಾಮ ಶಿಂಧೆ ಹಾಗೂ ಯಮಕನಮರಡಿ, ಹತ್ತರಗಿ, ಗುಡಗನಟ್ಟಿ, ಸುತ್ತಲಿನ ಹಲವಾರು ರೈತರು ಉಪಸ್ಥಿತರಿದ್ದರು.