Breaking News

ಗಣೇಶೋತ್ಸವದಲ್ಲಿ ‘ವಿಘ್ನ ನಿವಾರಕ’ನನ್ನು ಸ್ವಾಗತಿಸಲು ಜನರಷ್ಟೇ ಅಲ್ಲ; ಗುಂಡಿಗಳೂ ಸಜ್ಜಾಗಿವೆ.

Spread the love

ಬೆಳಗಾವಿ: ನಗರದಲ್ಲಿ ಈ ಬಾರಿ ಗಣೇಶೋತ್ಸವದಲ್ಲಿ ‘ವಿಘ್ನ ನಿವಾರಕ’ನನ್ನು ಸ್ವಾಗತಿಸಲು ಜನರಷ್ಟೇ ಅಲ್ಲ; ಗುಂಡಿಗಳೂ ಸಜ್ಜಾಗಿವೆ.

ಮುಂಬೈ, ಪುಣೆ ಬಿಟ್ಟರೆ ಸಂಭ್ರಮದ ಚೌತಿ ವೀಕ್ಷಣೆಗೆ ಜನರು ಮುಖಮಾಡುವುದೇ ಬೆಳಗಾವಿಯತ್ತ. ಗಣೇಶೋತ್ಸವದಲ್ಲಿ ಇಲ್ಲಿ 11 ದಿನಗಳ ಕಾಲ ಸಡಗರವೇ ಮೈದಳೆಯುತ್ತದೆ.

ನಗರ ಮತ್ತು ಉಪನಗರ ವ್ಯಾಪ್ತಿಯಲ್ಲಿ 370ಕ್ಕೂ ಅಧಿಕ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗುತ್ತದೆ.ಬೆಳಗಾವಿ: ಗಣೇಶನಿಗೆ ಗುಂಡಿಗಳೇ 'ವಿಘ್ನ'

ಸಾರ್ವಜನಿಕ ಗಣೇಶೋತ್ಸವ ಮಂಡಳಿಯವರು ಮೊದಲ ದಿನದಂದು ಮೆರವಣಿಗೆಯಲ್ಲಿ ಗಣೇಶನ ಮೂರ್ತಿ ತಂದು ಪ್ರತಿಷ್ಠಾಪಿಸುತ್ತಾರೆ. ವಿಸರ್ಜನಾ ಮೆರವಣಿಗೆಯೂ ಲಕ್ಷಾಂತರ ಜನರ ಸಮ್ಮುಖದಲ್ಲಿ ನೆರವೇರುತ್ತದೆ.

ಈ ಸಲ ಗಣೇಶನ ಹಬ್ಬಕ್ಕೆ ಐದೇ ದಿನ ಬಾಕಿ ಉಳಿದಿದೆ. ಆದರೆ, ಖಾನಾಪುರ ರಸ್ತೆ, ಹಳೇ ಪಿ.ಬಿ.ರಸ್ತೆ, ಗಾಂಧಿನಗರ, ಶಿವಾಜಿ ನಗರ, ವೀರಭದ್ರನಗರ, ಆಜಮ್‌ ನಗರ, ಶಾಹೂನಗರ, ಸಹ್ಯಾದ್ರಿನಗರ, ಸದಾಶಿವನಗರ, ಮಹಾಂತೇಶ ನಗರ ಹಾಗೂ ಕಣಬರಗಿ ಸೇರಿ ವಿವಿಧ ಮಾರ್ಗಗಳಲ್ಲಿ ಮತ್ತು ಮಾರುಕಟ್ಟೆ ಪ್ರದೇಶದಲ್ಲಿ ಹದಗೆಟ್ಟಿರುವ ರಸ್ತೆಗಳು ಇನ್ನೂ ಸುಧಾರಣೆ ಕಂಡಿಲ್ಲ. ಇದರಿಂದಾಗಿ ಗಣೇಶನ ಮೂರ್ತಿ ಹೊತ್ತು ಸಾಗುವ ವಾಹನಗಳ ಸಂಚಾರಕ್ಕೆ ತೊಡಕಾಗುವ ಸಾಧ್ಯತೆಯಿದೆ.

‘ಗಣೇಶೋತ್ಸವಕ್ಕೆ ಎರಡು ವಾರ ಮುಂಚೆಯಿಂದಲೇ ಮಹಾನಗರ ಪಾಲಿಕೆಯು ರಸ್ತೆಗಳ ಸುಧಾರಣೆಯ ಸಿದ್ಧತೆ ಆರಂಭಿಸಬೇಕಿತ್ತು. ಗಣೇಶನ ಮೂರ್ತಿಗಳನ್ನು ಸಾಗಿಸುವ, ವೀಕ್ಷಣೆಗೆ ಬರುವ ಜನರು ಸಂಚರಿಸುವ ಎಲ್ಲ ಮಾರ್ಗಗಳಲ್ಲಿನ ರಸ್ತೆಗಳನ್ನು ದುರಸ್ತಿ ಮಾಡಬೇಕಿತ್ತು. ಆದರೆ, ವಿವಿಧ ನೆಪವೊಡ್ಡಿ ಅಧಿಕಾರಿಗಳು ಜಾರಿಕೊಳ್ಳುತ್ತಿದ್ದಾರೆ. ಮೂರ್ತಿ ಸಾಗಣೆ ವೇಳೆ ಯಾವುದಾದರೂ ಅನಾಹುತ ಸಂಭವಿಸಿದರೆ ಯಾರು ಹೊಣೆ’ ಎಂಬ ಪ್ರಶ್ನೆ ಸಾರ್ವಜನಿಕರದ್ದು.

ಸಿಗದ ಸ್ಪಂದನೆ: ಗಣೇಶನ ಹಬ್ಬದ ಆಚರಣೆ ಕುರಿತು ಚರ್ಚಿಸಲು ಜಿಲ್ಲಾಡಳಿತವು ಸಾರ್ವಜನಿಕ ಗಣೇಶೋತ್ಸವ ಮಂಡಳಗಳು ಮತ್ತು ಸಾರ್ವಜನಿಕರೊಂದಿಗೆ ಇತ್ತೀಚೆಗೆ ಸಭೆ ನಡೆಸಿತ್ತು.

‘ಹಬ್ಬದ ಪ್ರಯುಕ್ತ ನಗರದಲ್ಲಿ ಹಾಳಾದ ಸ್ಥಿತಿಯಲ್ಲಿನ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಬೇಕು’ ಎಂದು ಮಂಡಳಗಳ ಪ್ರಮುಖರು ಒತ್ತಾಯಿಸಿದ್ದರು. ಆದರೆ, ಆಡಳಿತ ಯಂತ್ರದಿಂದ ಈವರೆಗೂ ಸ್ಪಂದನೆ ಸಿಗದಿರುವುದು ಅವರ ನಿರಾಸೆಗೆ ಕಾರಣವಾಗಿದೆ.


Spread the love

About Laxminews 24x7

Check Also

ಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ ಉದ್ಯಾನವನ

Spread the loveಅಥಣಿ ನಗರದಲ್ಲಿ ಇಂದು ರೋಟರಿ ಸಂಸ್ಥೆ ಅಧೀನದಲ್ಲಿ ಶ್ರೀ ಜ್ಯೋತಿಬಾ ದೇವಸ್ಥಾನ ಆವರಣದಲ್ಲಿ ನೂತನವಾಗಿ ನಿರ್ಮಿಸಿದ ರೋಟರಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ