Breaking News

ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

Spread the love

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ನಡುವೆ ಓಡಾಡುವ ಪ್ರಯಾಣಿಕರಿಗಾಗಿ ರಾಜ್ಯದಲ್ಲಿ ಮೊದಲ ಬಾರಿ ಪರಿಚಯಿಸಲಾದ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯು (ಬಿಆರ್‌ಟಿಎಸ್‌) ಪ್ರತಿ ತಿಂಗಳು ₹2.09 ಕೋಟಿ ನಷ್ಟ ಎದುರಿಸುತ್ತಿದೆ.

2018ರಲ್ಲಿ ಆರಂಭಿಸಲಾದ ಈ ಯೋಜನೆಯಡಿ ಅತಿ ಕಡಿಮೆ ಖರ್ಚಿನಲ್ಲಿ, ಹವಾನಿಯಂತ್ರಿತ ಬಸ್‌ಗಳಲ್ಲಿ ಸಾರ್ವಜನಿಕರು ಪ್ರಯಾಣಿಸಲು ಅವಕಾಶ ಕಲ್ಪಿಸಲಾಯಿತು.

ಪ್ರತಿ ದಿನ ಅವಳಿ ನಗರದ ನಡುವೆ 82 ಸಾವಿರ ಮಂದಿ ಪ್ರಯಾಣಿಸುತ್ತಾರೆ.

ಬಿಆರ್‌ಟಿಎಸ್‌ | ರಾಜ್ಯ ಸರ್ಕಾರದಿಂದ ಬಾರದ ಅನುದಾನ: ತಿಂಗಳಿಗೆ ₹2.09 ಕೋಟಿ ನಷ್ಟ

22 ಕಿ.ಮೀ ಉದ್ದದ ಕಾರಿಡಾರ್‌ನಲ್ಲಿ ವಿಶೇಷ ವಿನ್ಯಾಸದ 32 ನಿಲ್ದಾಣಗಳಿದ್ದು, 100 ‘ಚಿಗರಿ’ ಬಸ್‌ಗಳು ಇವೆ. ಯೋಜನೆಯ ನಿರ್ವಹಣೆ ಹೊಣೆ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ (ಎನ್‌ಡಬ್ಲ್ಯುಕೆಆರ್‌ಟಿಸಿ) ವಹಿಸಲಾಗಿದೆ.

ಚಿಗರಿ ಬಸ್‌ ಒಂದು ಕಿ.ಮೀ ಓಡಿಸಲು ಸರಾಸರಿ ₹ 80 ಖರ್ಚಾಗುತ್ತಿದೆ. ಬರುವ ಆದಾಯ ₹49. ಪ್ರತಿ ಕಿ.ಮೀಗೆ ₹31 ನಷ್ಟವಾಗುತ್ತಿದೆ. ಯೋಜನೆಯಿಂದ ಬರುವ ಆದಾಯಕ್ಕಿಂತ ಖರ್ಚು ಹೆಚ್ಚಾಗುತ್ತಿದೆ.

‘ಸಾಮಾನ್ಯ ಬಸ್‌ಗಳ ಮೈಲೇಜ್ ಪ್ರತಿ ಲೀಟರ್‌ಗೆ 4.8 ಕಿ.ಮೀ. ‘ಚಿಗರಿ’ ಬಸ್‌ಗಳಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಇರುವ ಕಾರಣ ಪ್ರತಿ ಲೀಟರ್‌ಗೆ 2.6 ಕಿ.ಮೀ ಮಾತ್ರ ಮೈಲೇಜ್ ಬರುತ್ತದೆ. ಬಸ್‌ಗಳು ಪ್ರತಿ ದಿನ 1,200 ಟ್ರಿಪ್ ಸಂಚರಿಸುತ್ತವೆ. ಇಂಧನ ದರವೂ ಹೆಚ್ಚಿದೆ. ಇದೂ ನಷ್ಟಕ್ಕೆ ಕಾರಣ’ ಎಂದು ಅಧಿಕಾರಿಗಳು ತಿಳಿಸಿದರು.

ಸರ್ಕಾರದಿಂದ ಬಾರದ ಅನುದಾನ:

‘ಯೋಜನೆ ಅನುಷ್ಠಾನಕ್ಕೆ ತಗುಲಿರುವ ವೆಚ್ಚ ₹920 ಕೋಟಿ. ಖರ್ಚು ಮತ್ತು ಆದಾಯದ ನಡುವಿನ ವ್ಯತ್ಯಾಸವನ್ನು (ಕಾರ್ಯಸಾಧ್ಯತಾ ಅಂತರ ನಿಧಿ) ರಾಜ್ಯ ಸರ್ಕಾರ ಭರಿಸಬೇಕು. ಯೋಜನೆ ಆರಂಭವಾದಾಗಿನಿಂದ ಯಾವ ಸರ್ಕಾರದಿಂದಲೂ ಅನುದಾನ ಸಿಕ್ಕಿಲ್ಲ’ ಎಂದು ಮೂಲಗಳು ಹೇಳುತ್ತವೆ.

‘ಯೋಜನೆಯಡಿ 100 ‘ಚಿಗರಿ’ ಬಸ್‌ಗಳ ಪೈಕಿ 88 ಬಸ್‌ಗಳು ಮಾತ್ರ ಸಂಚರಿಸುತ್ತಿವೆ. ಉಳಿದ ಬಸ್‌ಗಳು ಹಾಳಾಗಿವೆ. ನಿರ್ವಹಣೆಗೆ ಬೇಕಾದ ಉಪಕರಣಗಳು ಕೂಡ ಸಿಗುತ್ತಿಲ್ಲ. ಬಸ್‌ಗಳ ರಿಪೇರಿಗೆ ಬೇಕಾದ ಬಿಡಿ ಬಾಗಗಳು ವೋಲ್ವೊ ಕಂಪನಿಯಿಂದ ಸರಿಯಾಗಿ ಪೂರೈಕೆ, ಉತ್ಪಾದನೆ ಆಗುತ್ತಿಲ್ಲ. ಅವುಗಳ ದರ ಹೆಚ್ಚು ಇರುತ್ತದೆ. ಇದರಿಂದ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ’ ಎಂದು ಅಧಿಕಾರಿಗಳು ತಿಳಿಸಿದರು


Spread the love

About Laxminews 24x7

Check Also

ನೇಹಾ ಹಿರೇಮಠ ಕೊಲೆ ಆರೋಪಿಗೆ ಜಾಮೀನು ತಿರಸ್ಕಾರ: ಆ‌ಗಸ್ಟ್​​ 6ಕ್ಕೆ ವಿಚಾರಣೆ ಮುಂದೂಡಿಕೆ

Spread the loveಹುಬ್ಬಳ್ಳಿ: ಇಲ್ಲಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನೇಹಾ ಹಿರೇಮಠ ಕೊಲೆ ಆರೋಪಿ ಫಯಾಜ್ ಖೊಂಡೋನಾಯ್ಕ್​​​ಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ