Breaking News

ತಿರುಪತಿ ಲಡ್ಡಿಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪ

Spread the love

ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ಸಿಗುವ ವಿಶ್ವ ಪ್ರಸಿದ್ಧ ತಿರುಪತಿ ಪ್ರಸಾದವಾದ ಲಡ್ಡಿಗೆ ಮತ್ತೆ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪ ಪೂರೈಕೆಯಾಗಲಿದೆ. ನಂದಿನಿ ಉತ್ಪನ್ನ ಹಾಗೂ ನಂದಿನಿ ತುಪ್ಪಕ್ಕೆ ಕೇವಲ ಕರ್ನಾಟಕ ಮಾತ್ರವಲ್ಲ ದೇಶದ ವಿವಿಧ ರಾಜ್ಯಗಳಲ್ಲಿ ಬೇಡಿಕೆ ಇದೆ.

ನಂದಿನಿ ಉತ್ಪನ್ನಗಳಲ್ಲಿ ಗುಣಮಟ್ಟ ಹಾಗೂ ರುಚಿ, ಶುಚಿಯನ್ನು ಕಾಪಾಡಿಕೊಂಡಿರುವುದು ಸಹ ಇದಕ್ಕೆ ಕಾರಣ.

ತಿರುಪತಿ ಲಡ್ಡಿಗೆ ಮತ್ತೆ ಕರ್ನಾಟಕದ ನಂದಿನಿ ತುಪ್ಪ

ಕಳೆದ ವರ್ಷ ಉಂಟಾಗಿದ್ದ ಗೊಂದಲಗಳಿಂದಾಗಿ ತಿರುಪತಿ ದೇವಸ್ಥಾನದ ಲಡ್ಡಿನಲ್ಲಿ ಬಳಸಲಾಗುತ್ತಿದ್ದ ನಂದಿನಿ ತುಪ್ಪದ ಪೂರೈಕೆಯನ್ನು ನಿಲ್ಲಿಸಲಾಗಿತ್ತು. ಈಗಾಗಲೇ 2013-14ನೇ ಸಾಲಿನಿಂದ 2021-22ರವರೆಗೆ 5 ಸಾವಿರ ಟನ್‌ ನಂದಿನಿ ತುಪ್ಪವನ್ನು ತಿರುಪತಿ ದೇವಸ್ಥಾನಕ್ಕೆ ಸರಬರಾಜು ಮಾಡಿದೆ. ಪ್ರಸಕ್ತ ಸಾಲಿನಲ್ಲಿ ಆರಂಭಿಕವಾಗಿ 350 ಟನ್‌ ತುಪ್ಪವನ್ನು ಸರಬರಾಜು ಮಾಡಲು ಟೆಂಡರ್ ಮೂಲಕ ಬೇಡಿಕೆ ಬಂದಿದೆ.

ನಂದಿನಿ ತುಪ್ಪದ ಬೇಡಿಕೆಗೆ ಅನುಗುಣವಾಗಿ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ಸರಬರಾಜು ಮಾಡಲಾಗುತ್ತದೆ ಎಂದು ಕೆಎಂಎಫ್ ತಿಳಿಸಿದೆ. ಈ ಮೂಲಕ ತಿರುಪತಿ ತಿಮ್ಮಪ್ಪನ ದೇವಸ್ಥಾನದ ಲಡ್ಡಿನಲ್ಲಿ ಮತ್ತೆ ನಂದಿನಿ ತುಪ್ಪದ ಘಮಲು ಮೂಡಲಿದೆ.

ಎರಡೂ ರಾಜ್ಯಗಳ ನಡುವೆ ವಿವಾದಕ್ಕೆ ಕಾರಣವಾಗಿದ್ದ ನಂದಿನಿ ತುಪ್ಪ!

ಕಳೆದ ವರ್ಷ ಆಂಧ್ರಪ್ರದೇಶ ಹಾಗೂ ಕರ್ನಾಟಕ ರಾಜ್ಯದ ನಡುವೆ ನಂದಿನಿ ತುಪ್ಪ ಪೂರೈಕೆಯ ವಿಚಾರ ವಿವಾದಕ್ಕೆ ಕಾರಣವಾಗಿತ್ತು. ವಿಶ್ವ ವಿಖ್ಯಾತ ಹಾಗೂ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಾಲಯವೂ ಒಂದಾಗಿದೆ. ಅಲ್ಲದೇ ವಿಶ್ವದ ಶ್ರೀಮಂತ ದೇವಸ್ಥಾನಗಳಲ್ಲಿ ತಿರುಪತಿ ತಿಮ್ಮಪ್ಪನ ದೇವಸ್ಥಾನವೂ ಒಂದು ಎನ್ನುವ ಖ್ಯಾತಿ ಇದೆ.

ಅಲ್ಲದೇ ಕಳೆದ ಹಲವು ವರ್ಷಗಳಿಂದ ತಿರುಪತಿ ತಿಮ್ಮಪ್ಪನ ದೇವಸ್ಥಾನದಲ್ಲಿ ತಯಾರಾಗುವ ಲಡ್ಡಿಗೆ ಕರ್ನಾಟಕದ ಹೆಮ್ಮೆಯ ನಂದಿನಿ ತುಪ್ಪವನ್ನೇ ಪೂರೈಸಲಾಗುತ್ತಿತ್ತು. ಕಳೆದ ವರ್ಷ ಉಂಟಾಗಿದ್ದ ಗೊಂದಲದಿಂದ ನಂದಿನಿ ತುಪ್ಪ ಪೂರೈಕೆ ಸ್ಥಗಿತವಾಗಿತ್ತು.

ಇನ್ನು ತಿರುಪತಿ ತಿಮ್ಮಪ್ಪನ ದೇವಸ್ಥಾನಕ್ಕೆ ಕೆಲವು ವರ್ಷಗಳಿಂದ ಅಸ್ಮಾರ್ಕ್ ಸ್ಪೇಷಲ್ ಗ್ರೇಡ್ ಎನ್ನುವ ಹಸುವಿನ ತುಪ್ಪವನ್ನು ಟ್ಯಾಂಕರ್ ಮೂಲಕ ತಿರುಪತಿ ಲಡ್ಡಿನ ಪ್ರಸಾದ ತಯಾರಿಕೆಗೆ 5 ಸಾವಿರ ಟನ್ ನಂದಿನಿ ತುಪ್ಪವನ್ನು ಪೂರೈಕೆ ಮಾಡಲಾಗಿತ್ತು.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ