Breaking News

ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆ

Spread the love

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಮಾಯವ್ವ ಬಸವಂತ ದಾಸನವರ ಮತ್ತು ಉಪಾಧ್ಯಕ್ಷರಾಗಿ ಮೇಘಾ ಬಸವರಾಜ ಖಾನಾಪೂರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸೋಮವಾರದಂದು ಜರುಗಿದ ಪಟ್ಟಣ ಪಂಚಾಯತಿ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ತಲಾ ಒಂದೊಂದು ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಎರಡು ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿವೆ.

ಹಿಂದುಳಿದ “ಅ”ವರ್ಗ ಮಹಿಳೆಗೆ ಅಧ್ಯಕ್ಷ ಸ್ಥಾನವು ಮೀಸಲಿದ್ದರೇ, ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ಮೀಸಲಿತ್ತು. ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಸಮರ್ಥ ನೇತೃತ್ವದಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳು ಅವಿರೋಧವಾಗಿ ಆಯ್ಕೆಯಾದವು.
ಚುನಾವಣಾಧಿಕಾರಿಯಾಗಿ ಮೂಡಲಗಿ ತಹಶೀಲದಾರ ಡಾ|| ಮಹಾದೇವ ಸನ್ನಮುರಿ ಕರ್ತವ್ಯ ನಿರ್ವಹಿಸಿದರು.

ಚುನಾವಣಾ ಪ್ರಕ್ರೀಯೆ ಮುಗಿದ ಬಳಿಕ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಮಾಯವ್ವ ದಾಸನವರ ಅವರು, ನಮ್ಮ ಜನಪ್ರೀಯ ಶಾಸಕರಾದ ಬಾಲಚಂದ್ರ ಜಾರಕಿಹೊಳಿ ಅವರ ಮಾರ್ಗದರ್ಶನದಲ್ಲಿ, ಹಾಗೂ ಪಟ್ಟಣ ಪಂಚಾಯತಿ ಸದಸ್ಯರು ಮತ್ತು ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಲ್ಲೋಳಿ ಪಟ್ಟಣದ ಅಭಿವೃದ್ದಿಗೆ ಪಕ್ಷಾತೀತವಾಗಿ ಶ್ರಮಿಸುತ್ತೇನೆಂದು ತಿಳಿಸಿದರು.
ಜಿ.ಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ಪಟ್ಟಣ ಪಂಚಾಯತಿ ಸರ್ವ ಸದಸ್ಯರು, ಮುಖಂಡರು, ಶಾಸಕರ ಆಪ್ತ ಸಹಾಯಕರಾದ ಡಿ.ಕೆ.ನಾಯಿಕ ಮತ್ತು ಸಿ.ಪಿ ಯಕ್ಸಂಬಿ ಉಪಸ್ಥಿತರಿದ್ದರು.

 


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ