Breaking News

ವಿಟಿಯು: ಪ್ರಮಾಣಪತ್ರ ನಕಲು ತಡೆದ ತಂತ್ರಜ್ಞಾನ

Spread the love

ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು (ವಿಟಿಯು) ವಿದ್ಯಾರ್ಥಿಗಳಿಗೆ ವಿತರಿಸುವ ಅಂಕಪಟ್ಟಿ ಮತ್ತು ಘಟಿಕೋತ್ಸವ ಪ್ರಮಾಣಪತ್ರಗಳು ನಕಲು ಆಗುವುದನ್ನು ತಡೆಯಲು ಕ್ಯುಆರ್‌ ಕೋಡ್ ಸಹಿತ 15 ಬಗೆಯ ಸುರಕ್ಷತಾ ಕ್ರಮ ಅಳವಡಿಸಿಕೊಂಡಿದೆ.

ಈ ಕ್ರಮಗಳಿಂದಾಗಿ ಪ್ರಮಾಣಪತ್ರಗಳನ್ನು ನಕಲು ಮಾಡುವ ಅಥವಾ ತಿದ್ದುವ ಪ್ರಕರಣಗಳ ಪ್ರಮಾಣ ತಗ್ಗಿದೆ.

ದೇಶದ ಪ್ರತಿಷ್ಠಿತ ತಾಂತ್ರಿಕ ವಿಶ್ವವಿದ್ಯಾಲಯಗಳಲ್ಲಿ ಒಂದಾದ ವಿಟಿಯು ವ್ಯಾಪ್ತಿಯಲ್ಲಿ ಎಂಜಿನಿಯರಿಂಗ್‌ ಕಾಲೇಜು, ಸ್ನಾತಕೋತ್ತರ ಅಧ್ಯಯನ ಕೇಂದ್ರ ಸೇರಿ ಒಟ್ಟು 215 ಕಾಲೇಜುಗಳು ಇವೆ. ಪ್ರತಿ ವರ್ಷ ಘಟಿಕೋತ್ಸವದಲ್ಲಿ 80 ಸಾವಿರದಿಂದ 1 ಲಕ್ಷ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಗುತ್ತದೆ.

ವಿಟಿಯುನ ಕೆಲ ಪದವೀಧರರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳುವಾಗ, ಅವರ ಅಂಕಪಟ್ಟಿ ಮತ್ತು ಪ್ರಮಾಣಪತ್ರದ ಬಗ್ಗೆ ಆಯಾ ಸಂಸ್ಥೆಯವರು ಅನುಮಾನಗೊಂಡು ಅವುಗಳ ನೈಜತೆ ದೃಢಪಡಿಸಲು ವಿಟಿಯುಗೆ ಕಳುಹಿಸುತ್ತಿದ್ದರು. ಪ್ರಮಾಣಪತ್ರ ತಿದ್ದಿದ ಮತ್ತು ನಕಲಿ ಅಂಕಪಟ್ಟಿ ಸಲ್ಲಿಸಿದ್ದು ಪತ್ತೆಯಾಗುತ್ತಿತ್ತು.

‘ವಿವಿಧ ಸಂಸ್ಥೆಗಳಿಂದ ಬರುತ್ತಿದ್ದ ಕೆಲ ಅಂಕಪಟ್ಟಿ, ಪ್ರಮಾಣಪತ್ರಗಳು ನಕಲಿ ಆಗಿರುತ್ತಿದ್ದವು. ಅದಕ್ಕೆ ಅಂಕಪಟ್ಟಿಗೆ ಕ್ಯುಆರ್‌ ಕೋಡ್ ಮತ್ತು ಪ್ರಮಾಣಪತ್ರಗಳಿಗೆ 15 ಬಗೆಯ ಸುರಕ್ಷತಾ ಕ್ರಮ ಬಳಕೆ ಆರಂಭಿಸಿದ ಬಳಿಕ ನಕಲು ಚಟುವಟಿಕೆ ತಗ್ಗಿದೆ. ಇದರಿಂದ ವಿಟಿಯುಗೂ ಅನುಕೂಲವಾಗಿದೆ ಮತ್ತು ಸಂಕಷ್ಟವೂ ತಪ್ಪಿದೆ’ ಎಂದು ವಿಟಿಯು ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಎನ್.ಶ್ರೀನಿವಾಸ ತಿಳಿಸಿದರು.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ