ಧಾರವಾಡ: ಇಲ್ಲಿನ ರಾಧಾಕೃಷ್ಣನಗರ ನಿವಾಸಿ, ಕೊಳಲು ವಾದಕ ವೇಣುಗೋಪಾಲ ಎಸ್.ಹೆಗಡೆ (41) ಬುಧವಾರ ನಿಧನರಾದರು. ಅವರಿಗೆ ತಾಯಿ, ಪತ್ನಿ, ಪುತ್ರ ಇದ್ದಾರೆ.
ನಿತ್ಯಾನಂದ ಹಳದಿಪುರ ಅವರ ಶಿಷ್ಯರಾಗಿದ್ದ ವೇಣುಗೋಪಾಲ ಅವರು, ಕೊಳಲು ವಾದನದಲ್ಲಿ ಸಾಧನೆ ಮಾಡಿದ್ದರು. ಆಕಾಶವಾಣಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿದ್ದರು.
ಮುಂಬೈನ ಐಟಿಸಿ ಸಂಶೋಧನಾ ಅಕಾಡೆಮಿಯ ಪ್ರಶಸ್ತಿ ಸಹಿತ ಹಲವು ಪುರಸ್ಕಾರಗಳು ಅವರಿಗೆ ಸಂದಿವೆ.
Laxmi News 24×7