ಹಿರೇಬಾಗೇವಾಡಿ: ಇಲ್ಲಿನ ಮಲ್ಲಪ್ಪನಗುಡ್ಡದಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ನೂತನ ಕಟ್ಟಡಗಳು ನಿರ್ಮಾಣಗೊಳ್ಳುತ್ತಿರುವ ಸ್ಥಳಕ್ಕೆ ಆರೋಗ್ಯ ಮತ್ತು ಕುಟುಂಬ ಇಲಾಖೆಯ ಸಹಾಯಕ ಎಂಜಿನಿಯರ್ ಅರುಣ ಕುಮಾರ ಅವರು ಗುರುವಾರ ಭೇಟಿ ನೀಡಿ, ಪರಿಶೀಲಿಸಿದರು.
ಕಟ್ಟಡ ಕಾಮಗಾರಿಯಿಂದ ಜಮೀನುಗಳಿಗೆ ನೀರು ನುಗ್ಗದಂತೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ರೈತರು ಈಚೆಗೆ ಕುಲಪತಿಗೆ ಮನವಿ ಸಲ್ಲಿಸಿದ್ದರು.
ಈ ಹಿನ್ನೆಲೆಯಲ್ಲಿ ಭೇಟಿ ನೀಡಿದ ಅರುಣ ಕುಮಾರ ಅವರು, ರಸ್ತೆ ನಿರ್ಮಾಣ, ಅಂತರ್ಜಲ, ಜಮೀನುಗಳಿಗೆ ಉಂಟಾಗುವ ಹಾನಿ ತಡೆ ಕುರಿತು ಚರ್ಚಿಸಿದರು. ತಮ್ಮ ಕಾರ್ಯವ್ಯಾಪ್ತಿಯ ಕೆಲಸಗಳನ್ನು ಮಾಡುವುದಾಗಿ ಮತ್ತು ಹೆಚ್ಚುವರಿ ಕೆಲಸಗಳ ಬಗ್ಗೆ ಕುಲಪತಿ ಜೊತೆಗೆ ಚರ್ಚಿಸುವುದಾಗಿ ರೈತರಿಗೆ ತಿಳಿಸಿದರು.
Laxmi News 24×7