ಬೆಂಗಳೂರು: ಬಿಎಂಟಿಸಿ ನಿರ್ವಾಹಕರು, ಚಾಲಕರು ಮಾಸ್ಕ್ ಧರಿಸುವುದು ಕಡ್ಡಾಯವಾಗಿರುತ್ತದೆ.
ಒಂದೊಮ್ಮೆ ಚಾಲಕರು, ನಿರ್ವಾಹಕರು ಮಾಸ್ಕ್ ಧರಿಸಿದಿದ್ದರೆ 500 ರೂ. ದಂಡ ತೆರಬೇಕಾಗುತ್ತದೆ.ಬಿಎಂಟಿಸಿ ಚಾಲಕರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ ಎಂಡಿ ಶಿಖಾ ಈ ಸಿರ್ಧಾರ ತೆಗೆದುಕೊಂಡಿದ್ದಾರೆ.
ಕರ್ತವ್ಯ ನಿರ್ವಹಣೆ ವೇಳೆ ಚಾಲನಾ ಸಿಬ್ಬಂದಿ ಕೊರೊನಾ ಸಂಬಂಧಿ ಮುನ್ನೆಚ್ಚರಿಕೆಗಳನ್ನು ಕಡ್ಡಾಯವಾಗಿ ಕೈಗೊಳ್ಳಬೇಕು.
ಈ ಆದೇಶ ನಿರ್ಲಕ್ಷಿಸಿದರೆ ದಂಡದ ಜೊತೆಗೆ ಶಿಸ್ತು ಕ್ರಮ ಕೂಡ ಕೈಗೊಳ್ಳಲಾಗುವುದು ಎಂದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಬಿಎಂಟಿಸಿಯು ನಿಗಮದ ಚಾಲನಾ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದಿರುವುದು ತಮ್ಮ ಗಮನಕ್ಕೆ ಬಂದಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದರೆ ಶಿಸ್ತುಕ್ರಮ ಖಚಿತ ಎಂದಿದ್ದಾರೆ.
ಚಾಲಕ ಹಾಗೂ ನಿರ್ವಾಹಕರು ಮುಖಗವಸು ಧರಿಸಿದೆ ಮೊದಲ ಬಾರಿಗೆ ಸಿಕ್ಕಿಬಿದ್ದಿದ್ದರೆ 500 ರೂ ದಂಡ ತೆರಬೇಕು , ಒಂದಕ್ಕಿಂತ ಹೆಚ್ಚು ಬಾರಿ ಸಿಕ್ಕಿಬಿದ್ದರೆ ಚಾಲನಾ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.