Breaking News

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹3,252 ಕೋಟಿ ನಿವ್ವಳ ಲಾಭ

Spread the love

ವದೆಹಲಿ: 2024-25ನೇ ಆರ್ಥಿಕ ವರ್ಷದ ಜೂನ್‌ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ), ₹3,252 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಲಾಭದಲ್ಲಿ ಎರಡು ಪಟ್ಟು ಏರಿಕೆಯಾಗಿದೆ.

ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹3,252 ಕೋಟಿ ನಿವ್ವಳ ಲಾಭ

2023-24ನೇ ಆರ್ಥಿಕ ವರ್ಷದ ಜೂನ್ ತ್ರೈಮಾಸಿಕದಲ್ಲಿ ₹1,255 ಕೋಟಿ ಲಾಭಗಳಿಸಲಾಗಿತ್ತು.

ವಸೂಲಾಗದ ಸಾಲದ ‍ಪ್ರಮಾಣದಲ್ಲಿ ಇಳಿಕೆಯಾಗಿದೆ. ಜೊತೆಗೆ, ಬಡ್ಡಿ ವರಮಾನದಲ್ಲಿ ಏರಿಕೆಯಾಗಿದೆ. ಹಾಗಾಗಿ, ಈ ತ್ರೈಮಾಸಿಕದಲ್ಲಿ ಲಾಭ ಹೆಚ್ಚಳವಾಗಿದೆ ಎಂದು ಬ್ಯಾಂಕ್‌, ಶನಿವಾರ ತಿಳಿಸಿದೆ.

ಹಿಂದಿನ ವರ್ಷದ ಇದೇ ಅವಧಿಯಲ್ಲಿ ಬ್ಯಾಂಕ್‌ ₹28,579 ಕೋಟಿ ವರಮಾನ ಗಳಿಸಿತ್ತು. ಈ ತ್ರೈಮಾಸಿಕದಲ್ಲಿ ₹32,166 ಕೋಟಿ ಗಳಿಸಿದೆ.

ಕಳೆದ ವರ್ಷ ₹25,145 ಕೋಟಿ ಬಡ್ಡಿ ವರಮಾನಗಳಿಸಿತ್ತು. ಈ ಬಾರಿ ₹28,556 ಕೋಟಿ ಗಳಿಸಿದೆ. ವಸೂಲಾಗದ ಸಾಲದ ಸರಾಸರಿ ಪ್ರಮಾಣವು ಶೇ 7.73ರಿಂದ ಶೇ 4.98ಕ್ಕೆ ಕುಗ್ಗಿದೆ. ನಿವ್ವಳ ಎನ್‌ಪಿಎ ಶೇ 1.98ರಿಂದ ಶೇ 0.60ಕ್ಕೆ ಇಳಿಕೆಯಾಗಿದೆ.


Spread the love

About Laxminews 24x7

Check Also

ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವ

Spread the love ಬೆಳಗಾವಿ: ಸಕ್ಕರೆ ಕಾರ್ಖಾನೆಯ ಕ್ರಷರ್ ಬೆಲ್ಟ್ ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಹುಕ್ಕೇರಿ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ