ಶಿವಮೊಗ್ಗ: ಗಾಜನೂರಿನ ತು೦ಗಾ ಜಲಾಶಯಕ್ಕೆ 70 ಸಾವಿರ ಕ್ಯೂಸೆಕ್ ಗಿಂತಲೂ ಅಧಿಕ ನೀರು ಬರುತ್ತಿದ್ದು ಅಷ್ಟೇ ಪ್ರಮಾಣದ ನೀರು ನದಿಗೆ ಬಿಡಲಾಗುತ್ತಿರುವುದರಿಂದ ಈ ಭಾಗದ ರಸ್ತೆಗಳು ಜಲಾವೃತವಾಗುತ್ತದೆ. ಇದರಿಂದ ಗದ್ದೆ ತೋಟಗಳು ಮುಳುಗಿ ತುಂಬಾ ನಷ್ಠವಾಗುತ್ತಿದೆ.
ಪ್ರತಿ ವರ್ಷದ ಮಳೆಗಾಲದಲ್ಲಿ ಈ ಪರಿಸ್ಥಿತಿ ಉಂಟಾಗುತ್ತಿದ್ದು ಇದಕ್ಕೊಂದು ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಳ್ಳಬೇಕಿದೆ ಎಂಬುದು ಈ ಭಾಗದ ರೈತರ, ಗ್ರಾಮಸ್ಥರ ಮತ್ತು ಭಕ್ತರ ಆಗ್ರಹವಾಗಿದೆ.

ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಿದ್ದು ಶನಿವಾರ 178 ಅಡಿಗಳಿಗೆ ತಲುಪಿದೆ. ಗರಿಷ್ಠ ಮಟ್ಟ ತಲುಪಲು ಇನ್ನು ಕೇವಲ 8 ಅಡಿ ನೀರು ಬರಬೇಕಿದೆ.
ಜಲಾಶಯಕ್ಕೆ ಪ್ರಸ್ತುತ 50 ಸಾವಿರ ಕ್ಯೂಸೆಕ್ ನೀರು ಬರುತ್ತಿದ್ದು ಜಲಾಶಯದ ಹಿತದೃಷ್ಟಿಯಿಂದ ಯಾವ ಸಮಯದಲ್ಲಾದರೂ ನದಿಗೆ ನೀರನ್ನು ಹರಿಸುವ ಸಾಧ್ಯತೆ ಇದ್ದು ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವ೦ತೆ ಭದ್ರ ಅಧೀಕ್ಷಕ ಇಂಜನಿಯರ್ ಸುಜಾತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Laxmi News 24×7