Breaking News

50 ದಿನದಲ್ಲಿ ರೇಣುಕಾ ಯಲ್ಲಮ್ಮ ದೇವಿಗೆ ಬಂದ ಕಾಣಿಕೆ ಎಷ್ಟು ಕೋಟಿ ಗೊತ್ತಾ..?

Spread the love

ಬೆಳಗಾವಿ : ಕರ್ನಾಟಕ ,ಮಹಾರಾಷ್ಟ್ರ ಹಾಗೂ ಗೋವಾ ಸೇರಿದಂತೆ ವಿವಿಧ ಕಡೆ ಭಕ್ತರನ್ನು ಹೊಂದಿರುವ ಸವದತ್ತಿ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಕೇವಲ 50 ದಿನದಲ್ಲಿ ಬರೋಬರಿ 1.96ಕೋಟಿ ಭಕ್ತರ ಕಾಣಿಕೆ ಸಂಗ್ರಹವಾಗಿದೆ‌.

ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀರೇಣುಕಾ ಯಲ್ಲಮ್ಮನ ದೇವಸ್ಥಾನದಲ್ಲಿ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಏಪ್ರಿಲ್‌ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಹಾಕಿದ್ದ ಭಕ್ತರ ಕಾಣಿಕೆ ಎಣಿಕೆ ಬುಧುವಾರ ರಾತ್ರಿ ಮುಕ್ತಾಯವಾಗಿದೆ‌‌.

 

 

50ದಿನಗಳಲ್ಲಿ ಒಟ್ಟು 1.96 ಕೋಟಿ ರೂ. ಕಾಣಿಕೆ‌ ಸಂಗ್ರಹವಾಗಿದೆ. ಅದರಲ್ಲಿ 1.71 ಕೋಟಿ ನಗದು, 20.44 ಲಕ್ಷ ಮೌಲ್ಯದ ಚಿನ್ನಾಭರಣ, 4.44 ಲಕ್ಷ ಮೌಲ್ಯದ ಬೆಳ್ಳಿ ಆಭರಣ ಸಂಗ್ರಹವಾಗಿದೆ.

ಶಕ್ತಿಯೋಜನೆಯಿಂದ ಯಲ್ಲಮ್ಮನ ಗುಡ್ಡಕ್ಕೆ ಅಪಾರ ಸಂಖ್ಯೆಯಲ್ಲಿ ಮಹಿಳಾ ಭಕ್ತರ ಹೆಚ್ಚಳವಾಗಿದೆ. ಹಾಗಾಗಿ ದಾಖಲೆ ಪ್ರಮಾಣದಲ್ಲಿ ದೇಣಿಗೆ ಸಂಗ್ರಹವಾಗಿದೆ
ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್ ಪಿಬಿ ಮಹೇಶ ಮಾಹಿತಿ ನೀಡಿದರು


Spread the love

About Laxminews 24x7

Check Also

ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯ ಹೊಸ ಕಟ್ಟಡ ಉದ್ಘಾಟಿಸಿದ ಸಂಸದೆ ಪ್ರಿಯಂಕಾ ಜಾರಕಿಹೊಳಿ

Spread the love ಚಿಕ್ಕೋಡಿ :ನೂತನವಾಗಿ ನಿರ್ಮಾಣವಾದ ನಾಗರಮುನ್ನೋಳಿ ಬ್ಲಾಕ್ ಕಾಂಗ್ರೆಸ್ ಕಚೇರಿಯನ್ನು ಸಂಸದೆ ಪ್ರಿಯಂಕಾ ಜಾರಕಿಹೊಳಿ ಉದ್ಘಾಟಿಸಿದರು. ಬಳಿಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ