Breaking News

ಟೆಟ್ರಾಪ್ಯಾಕ್​ನಲ್ಲಿ ಅಗ್ಗದ ಬೆಲೆಗೆ ಮದ್ಯ ಮಾರಾಟ.. ತಮಿಳುನಾಡು ಸರ್ಕಾರ ಚಿಂತನೆ!

Spread the love

ಚೆನ್ನೈ: ನಕಲಿ ತಡೆ, ಬೆಲೆ, ಪರಿಸರ ಮತ್ತು ಶುಚಿತ್ವದ ದೃಷ್ಟಿಯಿಂದ ಟೆಟ್ರಾ ಪ್ಯಾಕ್‌ ಅಥವಾ ಪ್ಲಾಸ್ಟಿಕ್​ ಬಾಟಲಿಗಳಲ್ಲಿ ಮದ್ಯ ಮಾರಾಟ ಮಾಡುವ ಬಗ್ಗೆ ತಮಿಳುನಾಡು ಸರ್ಕಾರ ಚಿಂತನೆ ನಡೆಸಿದೆ.

ಟೆಟ್ರಾಪ್ಯಾಕ್​ನಲ್ಲಿ ಅಗ್ಗದ ಬೆಲೆಗೆ ಮದ್ಯ ಮಾರಾಟ.. ತಮಿಳುನಾಡು ಸರ್ಕಾರ ಚಿಂತನೆ!

ಕಲ್ಲಕುರಿಚಿಯಲ್ಲಿ ನಕಲಿ ಮದ್ಯದಿಂದ ನಡೆದ ಅನಾಹುತದ ಬಳಿಕ ಎಚ್ಚೆತ್ತುಕೊಂಡಿರುವ ಸ್ಟಾಲಿನ್​ ಸರ್ಕಾರ, ಬಡವರ ಕೈಗೆಟಕುವಂತೆ 50ರೂ.ನಿಂದ 80ರೂ.ಒಳಗೆ 100ಎಂಎಲ್​ನ ಕ್ವಾರ್ಟರ್ ಪ್ಲಾಸ್ಟಿಕ್​ ಬಾಟಲಿಗಳು ಅಥವಾ ಟೆಟ್ರಾಪ್ಯಾಕ್​ಗಳಲ್ಲಿ ಮದ್ಯ ಮಾರಾಟ ಮಾಡಲು ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.

ಕಡಿಮೆ ಬೆಲೆಗೆ ನಕಲಿ ಮಾಡದಂತೆ ಮದ್ಯ ಒದಗಿಸುವುದರಿಂದ ಕೂಲಿ ಕಾರ್ಮಿಕರು ಅದನ್ನು ಖರೀದಿಸುತ್ತಾರೆ. ಇದು ಜನರ ಬೇಡಿಕೆಯೂ ಆಗಿದೆ ಎಂಬುದು ಸರ್ಕಾರದ ನಿಲುವಾಗಿದೆ ಎನ್ನಲಾಗುತ್ತಿದೆ.

ನೆರೆಯ ಕರ್ನಾಟಕ ಮತ್ತು ಪುದುಚೇರಿಯಲ್ಲಿ ಈಗಾಗಲೇ ಕಾಗದದ ಪೊಟ್ಟಣಗಳಲ್ಲಿ ಮದ್ಯಮಾರಾಟ ಮಾಡಲಾಗುತ್ತಿದೆ. ಇದರಿಂದ ನಕಲಿ ಮಾಡಲು ಸಾಧ್ಯವಾಗುತ್ತಿಲ್ಲ. ಇದರ ಕಾರ್ಯಸಾಧ್ಯತೆಯನ್ನು ಅಧ್ಯಯನ ಮಾಡಲು ಅಧಿಕೃತ ತಂಡವನ್ನು ರಚಿಸಲಾಗಿದೆ ಎಂದು ಅಬಕಾರಿ ಸಚಿವ ಎಸ್ ಮುತ್ತುಸಾಮಿ ತಿಳಿಸಿದ್ದಾರೆ.

ಮರುಬಳಕೆ ಮಾಡಬಹುದಾದ ಮದ್ಯದ ಬಾಟಲಿಗಳ ಅಸಮರ್ಪಕ ಶುಚಿಗೊಳಿಸುವಿಕೆಯಿಂದ ಅನಾಹುತಗಳು ನಡೆಯಬಹುದು. ಆದರೆ ಟೆಟ್ರಾ ಪ್ಯಾಕ್‌ಗಳು ಅಂತಹ ಸಮಸ್ಯೆಗಳನ್ನು ನಿವಾರಿಸುತ್ತವೆ. ಕಲಬೆರಕೆ ಮಾಡಲಾಗುವುದಿಲ್ಲ. ನಿರ್ವಹಿಸಲು ಸುಲಭ ಎಂದು ಅವರು ಹೇಳಿದ್ದಾರೆ.

2001ರಲ್ಲಿ ತಮಿಳುನಾಡಿನಲ್ಲಿ ಮದ್ಯದ ಸಾವು ಹೆಚ್ಚಾದಾಗ 100 ಎಂಎಲ್ ಗೆ 15 ರೂ.ಗೆ ಅಗ್ಗದ ಮದ್ಯ ಮಾರಾಟ ಆರಂಭಿಸಿ, ಕೊನೆಗೆ ನಿಲ್ಲಿಸಲಾಗಿತ್ತು.

See alsoಕೆಪಿಎಸ್​ಸಿ 2011ರ ಬ್ಯಾಚ್ ಸಿಂಧು: 362 ಹುದ್ದೆಗಳ ನೇಮಕ ಊರ್ಜಿತ; ವಿಧೇಯಕ ಮಂಡನೆ ಮಾಡಿದ ಸರ್ಕಾರ


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ