Breaking News

ಬಾಡಿ ಬಿಲ್ಡ್ ಮಾಡಿ ಯುವತಿಯರ ಮುಂದೆ ಪ್ರದರ್ಶಿಸುತ್ತಿದ್ದ ಯುವಕನಿಗೆ ಪೊಲೀಸರ ವರ್ಕೌಟ್

Spread the love

ಬೆಳಗಾವಿ: ಜಿಮ್ ಹೋಗೋದು, ವ್ಯಾಯಾಮ, ಕಸರತ್ತು ಮಾಡಿ ದೇಹವನ್ನು ಸಾಮು ಮಾಡಿಕೊಳ್ಳುವುದು ತಪ್ಪಲ್ಲ. ಅದರೆ ನಾನು ದೇಹವನ್ನು ಸಾಮು ಮಾಡಿಕೊಂಡಿದ್ದೇನೆ, ನನ್ನ ದೇಹ ನೋಡಿ ಅಂತ ಎದೆ ಮೇಲಿನ ಕೂದಲು ಬೋಳಿಸಿಕೊಂಡು ಶರ್ಟ್ ಬಿಚ್ಚಿ ಕಾಲೇಜು ಯವತಿಯರ ಮುಂದೆ ನಿಂತುಕೊಳ್ಳೋದು ಖಂಡಿತ ತಪ್ಪು.

ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದ ಬಾಳೇಶ್ ಹೆಸರಿನ ಯುವಕನಿಗೆ ಇಂಥ ತಪ್ಪು ಅರ್ಥಮಾಡಿಸಲು ಪೊಲೀಸರು ಮಧ್ಯಪ್ರವೇಶಿಸಬೇಕಾಯಿತು. ಇವನು ನನ್ನ ದೇಹ ಸಲ್ಮಾನ್ ಖಾನ್ ನಂತಿದೆ ಅಂತ ಹುಡುಗಿಯರಿಗೆ ತೋರಿಸಲು ಅಥಣಿ ಬಸ್ ನಿಲ್ದಾಣದಲ್ಲಿ ಶರ್ಟ್ ಬಿಚ್ಚಿ ಬರಿ ಮೈಯಲ್ಲಿ ಓಡಾಡುತ್ತಿದ್ದನಂತೆ.

ಸಜ್ಜನೊಬ್ಬರು ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ನಮಗೂ ನಿನ್ನ ಬಾಡಿ ತೋರಿಸು ಬಾ ಅಂತ ಸ್ಟೇಷನ್ ಗೆ ಕರೆದೊಯ್ದು ಶರ್ಟ್ ಜೊತೆ ಪ್ಯಾಂಟ್ ಕೂಡ ಬಿಚ್ಚಿಸಿ ಸತ್ಕಾರ ಮಾಡಿದ್ದಾರೆ ಮತ್ತು ತಾನು ಮಾಡಿದ್ದು ತಪ್ಪು ಅಂತ ಅವನಿಂದಲೇ ಹೇಳಿಸಿ ಆ ವಿಡಿಯೋವನ್ನು ಅಪ್ಲೋಡ್ ಮಾಡಿಸಿದ್ದಾರೆ. ಆಗಲೇ ಬಾಳೇಶ್ ಗೆ ಅ ತನ್ನ ಬಾಡಿ ಪ್ರದರ್ಶನದ ವಸ್ತು ಅಲ್ಲ ಅನ್ನೋದು ಭಾಳ ಚೆನ್ನಾಗಿ ಗೊತ್ತಾಗಿದೆ.

ಅವನು ಕ್ಷಮೆ ಕೇಳಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


Spread the love

About Laxminews 24x7

Check Also

ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆ ನಿಮ್ಮ ನಂಬಿಕೆ ಉಳಿಸಿಕೊಂಡು, ತಾಲ್ಲೂಕಿನ ರೈತರು ಮತ್ತು ಸಹಕಾರಿ ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ

Spread the loveಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ (BDCC) ಬ್ಯಾಂಕ್‌ನ ನಿರ್ದೇಶಕರ ಸ್ಥಾನಕ್ಕೆ ಯರಗಟ್ಟಿ ತಾಲ್ಲೂಕಿನಿಂದ ಅವಿರೋಧವಾಗಿ ಆಯ್ಕೆಯಾಗಲು ಕಾರಣರಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ