Breaking News

ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

Spread the love

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮದ ಹಿಂದೆ ಹನಿಟ್ರ್ಯಾಪ್‌ ಇದೆ ಎಂದು ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಗಂಭೀರ ಆರೋಪ ಮಾಡಿದ್ದು, ಪ್ರಕರಣಕ್ಕೆ ಹೊಸ ತಿರುವು ನೀಡಿದ್ದಾರೆ.

ಆಂಧ್ರಪ್ರದೇಶದ ಸತ್ಯನಾರಾಯಣ ವರ್ಮ ಎಂಬಾತ ಈ ಪ್ರಕರಣದ ಸೂತ್ರಧಾರ.

ವರ್ಮ ಒಬ್ಬ ವೃತ್ತಿಪರ ಕೇಡಿ ಎನ್ನುವ ಮಾಹಿತಿಯಿದೆ. ಹಲವು ರಾಜ್ಯಗಳಲ್ಲಿ ನಡೆದ ಅಕ್ರಮಗಳಲ್ಲಿ ಈತನ ಪಾತ್ರವಿದೆ ಎಂಬ ಆರೋಪಗಳು ಕೇಳಿಬಂದಿವೆ. ಈತನಿಗೆ ನಮ್ಮ ರಾಜ್ಯದ ಸಚಿವರು, ಶಾಸಕರು, ಅಧಿಕಾರಿಗಳು ಸಹಕರಿಸಿದ್ದಾರೆ. ಇದಕ್ಕೆ ಕಾರಣ ವೇನು ಎಂದು ಪತ್ರಿಕಾಗೋಷ್ಠಿಯಲ್ಲಿ ಸಿ.ಟಿ. ರವಿ ಪ್ರಶ್ನಿಸಿದರು. ಇದಲ್ಲದೆ ನಿಗಮಕ್ಕೆ ಸೇರಿದ 187 ಕೋಟಿ ರೂ.ಗಳನ್ನು ತೆಲಂಗಾಣ, ಆಂಧ್ರ ಪ್ರದೇಶ, ಕರ್ನಾಟಕದಲ್ಲಿ ಚುನಾವಣೆಗಾಗಿ ಬಳಕೆ ಮಾಡ ಲಾಗಿದೆ ಎಂದು ಆರೋಪಿಸಿದರು.CT Ravi; ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮಕ್ಕೆ ಹನಿ ಟ್ರ್ಯಾಪ್‌ ನಂಟು

ರಾಜ್ಯದ ಸಚಿವರು, ಶಾಸಕರು ಸಹಕಾರ ನೀಡದಿದ್ದರೆ ವರ್ಮಾನಿಂದ ಏನು ಮಾಡುವುದಕ್ಕೂ ಸಾಧ್ಯವಾಗು ತ್ತಿರಲಿಲ್ಲ. ಲಭ್ಯ ಮಾಹಿತಿಯ ಪ್ರಕಾರ ಇವರನ್ನೆಲ್ಲ ಗೋವಾ, ಹೈದರಾಬಾದ್‌ಗೆ ಕರೆದುಕೊಂಡು ಹೋಗಿ ಹನಿಟ್ರ್ಯಾಪ್‌ ಬಲೆಗೆ ಕೆಡವಿದ್ದ. ಸಿಹಿ ತಿನ್ನಿಸಿ ಜಾಲಕ್ಕೆ ಬೀಳಿಸಿದ್ದಾರೆ. ಈ ಜಾಲ ದೊಡ್ಡದು, ವೃತ್ತಿಪರವಾದದ್ದು. ಪ್ರಕರಣ ಬಯ ಲಾದ ಆರಂಭದಲ್ಲಿ ಕಮಿಷನ್‌ ಆಸೆಗೆ ಹಣ ಅಕ್ರಮ ವರ್ಗಾವಣೆ ಎಂದು ಹೇಳಲಾಯಿತು. ಅನಂತರ ರಿಯಲ್‌ ಎಸ್ಟೇಟ್‌ನಲ್ಲಿ ಲಾಭ ಮಾಡಿಕೊಂಡ ಬಳಿಕ ಹಣ ವಾಪಸ್‌ ಹಾಕುವವರಿದ್ದರು ಎನ್ನಲಾಯಿತು. ಆದರೆ ಇದರ ಅಸಲಿಯತ್ತು ಬೇರೆಯದೇ ಇದೆ ಎಂದು ಸಿ.ಟಿ. ರವಿ ಆರೋಪಿಸಿದರು.

ನೆಕ್ಕುಂಟಿ ನಾಗರಾಜ್‌ ಹೆಸರು ಹೊರಬಿದ್ದಾಗ, “ಆತ ನಾಗೇಂದ್ರ ಆಪ್ತನಲ್ಲ. ಕಚೇರಿಯಲ್ಲಿ ಕ್ಲರ್ಕ್‌ ಆಗಿದ್ದ’ ಎಂದು ತೇಪೆ ಹಚ್ಚುವ ಪ್ರಯತ್ನ ನಡೆಸಿದರು. ಇದರಲ್ಲಿ ಹನಿಟ್ರ್ಯಾಪ್‌ ಸಂಬಂಧ ಇರುವುದು ನಿಚ್ಚಳವಾಗಿದೆ. ನಿಗಮದ ಹಣ ಲೂಟಿ ಹೊಡೆದು, ಚುನಾವಣೆಗೆ ಪಾರ್ಟಿ ಫ‌ಂಡ್‌ ರೂಪದಲ್ಲಿ ತೆಲಂಗಾಣ, ಆಂಧ್ರಪ್ರದೇಶ, ಕರ್ನಾಟಕದ ಕಾಂಗ್ರೆಸ್‌ ಅಭ್ಯರ್ಥಿಗಳಿಗೆ ಹಂಚಿದ್ದಾರೆ. ಮಾಜಿ ಸಚಿವ ನಾಗೇಂದ್ರ, ಶಾಸಕ ಬಸವರಾಜ್‌ ದದ್ದಲ್‌ ಇಬ್ಬರ ಮೇಲೂ ಪ್ರಕರಣ ದಾಖಲಾಗಬೇಕು ಎಂದು ಆಗ್ರಹಿಸಿದರು.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​​: ಅನಾಮಿಕನ ಮುಖವಾಡ ಕಳಚಿದ ಮಾಜಿ ಪತ್ನಿ

Spread the loveಮಂಡ್ಯ, (ಆಗಸ್ಟ್ 21): ನೂರಾರು ಶವ ಹೂತಿರುವುದಾಗಿ ಆರೋಪಿಸಿ ಧರ್ಮಸ್ಥಳ ಪ್ರಕರಣವನ್ನು (Dharmasthala Case) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಲು ಕಾರಣವಾದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ