ಬೆಂಗಳೂರು: ಚಿತ್ರದುರ್ಗದ (Chitradurga) ರೇಣುಕಾಸ್ವಾಮಿ ಹತ್ಯೆ (Renukaswamy Murder Case) ಆರೋಪ ಎದುರಿಸುತ್ತಿರೋ ನಟ ದರ್ಶನ್ (Actor Darshan) ಇದೀಗ ಜೈಲು ಸೇರಿದ್ದಾರೆ. ಎ2 ಆರೋಪಿ ದರ್ಶನ್, ವಿನಯ್, ಪ್ರದೋಶ್ ಹಾಗೂ ಧನರಾಜ್ ಸೇರಿ ನಾಲ್ವರಿಗೆ ನ್ಯಾಯಾಂಗ ಬಂಧನ (Judicial Custody) ವಿಧಿಸಿ ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ (ACMM Court) ಆದೇಶ ನೀಡಿದೆ.
ದರ್ಶನ್ ಆಯಂಡ್ ಗ್ಯಾಂಗ್‌ಗೆ 13 ದಿನ ಅಂದರೆ ಜುಲೈ 4ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದೆ. ಇದರೊಂದಿಗೆ ದರ್ಶನ್ 2ನೇ ಬಾರಿ ಪರಪ್ಪನ ಅಗ್ರಹಾರದಲ್ಲಿರುವ (Parappana Agrahara) ಸೆಂಟ್ರಲ್ ಜೈಲು (Central Jail) ಸೇರಿದ್ದಾರೆ. 13 ವರ್ಷಗಳ ಬಳಿಕ ದರ್ಶನ್ ಮತ್ತೊಮ್ಮೆ 13 ದಿನ ಜೈಲು ಸೇರಿದಂತಾಗಿದೆ.
2ನೇ ಬಾರಿ ಪರಪ್ಪನ ಅಗ್ರಹಾರ ಜೈಲು ಸೇರಿದ ದರ್ಶನ್
ನಟ ದರ್ಶನ್ ಪರಪ್ಪನ ಅಗ್ರಹಾರ ಜೈಲು ಸೇರುತ್ತಿರುವುದು ಇದೇ ಮೊದಲೇನಲ್ಲ. ಅಂದಹಾಗೆ ಇದೀಗ 2ನೇ ಬಾರಿ ದರ್ಶನ್ ಜೈಲು ಸೇರಿದ್ದಾರೆ. ಹಿಂದೊಮ್ಮೆ ಪತ್ನಿ ವಿಜಯಲಕ್ಷ್ಮೀ ಮೇಲೆ ಹಲ್ಲೆ ನಡೆಸಿದ ಕೇಸ್‌ನಲ್ಲಿ ದರ್ಶನ್ ಜೈಲು ಪಾಲಾಗಿದ್ದರು.
13 ವರ್ಷಗಳ ಬಳಿಕ ಮತ್ತೆ 13 ದಿನ ಜೈಲು
13 ವರ್ಷಗಳ ನಂತರ ನಟ ದರ್ಶನ್ ಮತ್ತೆ ಜೈಲು ಪಾಲಾಗಿದ್ದಾರೆ. ಈ ಬಾರಿ 13 ದಿನ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್ ಆದೇಶಿಸಿದ್ದು, ಸದ್ಯಕ್ಕೆ 13 ದಿನ ದರ್ಶನ್ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಲಿದ್ದಾರೆ.