ನವದೆಹಲಿ: ದೇಶದಾದ್ಯಂತ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ. ದೇಶದ ಉತ್ತರ ಮತ್ತು ವಾಯುವ್ಯ ಪ್ರದೇಶಗಳಲ್ಲಿ ತೀವ್ರ ತಾಪಮಾನ ಇರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಂಗಳವಾರ ಹೇಳಿದೆ.

ಮುಂಗಾರು ಮಳೆ ಕುರಿತು ಮುನ್ಸೂಚನೆ ನೀಡಿರುವ ಐಎಂಡಿ, ‘ಜೂನ್ ತಿಂಗಳಲ್ಲಿ ಸುರಿಯುವ ಒಟ್ಟಾರೆ ಮಳೆ ಪ್ರಮಾಣವು, ದೇಶದ ದೀರ್ಘಕಾಲದ ಸರಾಸರಿ (ಎಲ್‌ಪಿಎ) 92 ಸೆಂಟಿ ಮೀಟರ್‌ಗಿಂತಲೂ ಕಡಿಮೆ ಇರಲಿದೆ’ ಎಂದು ಅಂದಾಜಿಸಿದೆ.
ಮೇ 30ರಂದು ಕೇರಳದಲ್ಲಿ ನೈಋತ್ಯ ಮುಂಗಾರು ಆರಂಭವಾದಾಗಿನಿಂದ ಶೇ 20ರಷ್ಟು ಮಳೆ ಕೊರೆತೆಯಾಗಿದೆ ಎಂದೂ ತಿಳಿಸಿದೆ.
Laxmi News 24×7