ಹಾವೇರಿ: ರಾಜ್ಯ ಸರಕಾರ ಬೆಲೆ ಏರಿಕೆ ಮಾಡಿದ್ದು ದೊಡ್ಡ ಆಘಾತವಾಗಿದೆ. ನೇರವಾಗಿ ರಾಬರಿ ಮತ್ತು ಡಕಾಯತಿ ಇದು. ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ. ಸಾರ್ವಜನಿಕರ ಜೇಬಿಗೆ ಸರಕಾರ ಕತ್ತರಿ ಹಾಕಿದೆ. ಗ್ಯಾರಂಟಿ ಕೊಟ್ಟರೂ ಜನರು ಕೈ ಹಿಡಿಯಲಿಲ್ಲ ಎಂದು ಹತಾಶರಾಗಿದ್ದಾರೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ ಹರಿಹಾಯ್ದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,187 ಕೋಟಿ ಭ್ರಷ್ಟಾಚಾರ ಮಾಡಿ ಆಂಧ್ರ ಪ್ರದೇಶದ ಚುನಾವಣೆಗೆ ಬಳಸಿದ್ದಾರೆ. ಈ ಹಗರಣದಲ್ಲಿ ಮುಖ್ಯಮಂತ್ರಿಗಳ ಕೈವಾಡವಿದೆ. ನಾಗೇಂದ್ರ ಅವರ ರಾಜೀನಾಮೆ ಪಡೆದು ಪ್ರಕರಣ ಮುಚ್ಚಿ ಹಾಕುವುದಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ಆಡಳಿತ ಯಂತ್ರ ಕುಸಿದು ಬಿದ್ದಿದೆ. ಆಡಳಿತ ನಡೆಸಲು ಮುಖ್ಯಮಂತ್ರಿಗಳು ವಿಫಲರಾಗಿದ್ದಾರೆ. ಮೊದಲು ಸಿಎಂ, ಡಿಸಿಎಂ ತಲೆದಂಡ ಮಾಡಿಕೊಂಡು ಮಂತ್ರಿಗಳ ರಾಜೀನಾಮೆ ಕೇಳುವುದು ಸೂಕ್ತ ಎಂದರು.
ಒಂದು ವರ್ಷದಿಂದ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ. ಹಾಲಿನ ದರವನ್ನು ಹಾವೇರಿಯಲ್ಲಿ ಕಡಿಮೆ ಮಾಡಿ ಗಾಯದ ಮೇಲೆ ಬರೆ ಎಳೆದಿದ್ದಾರೆ ಎಂದರು.
Laxmi News 24×7