Breaking News

ಬೆಂಗಳೂರಲ್ಲಿ ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕ ಸಾವು

Spread the love

ಬೆಂಗಳೂರು: ಸಂಪಂಗಿ ರಾಮನಗರದಲ್ಲಿ ವೈದ್ಯರೊಬ್ಬರು ಮಾಡಿದಂತ ಎಡವಟ್ಟಿಗೆ 7 ವರ್ಷದ ಬಾಲಕನೊಬ್ಬ ಧಾರುಣವಾಗಿ ಸಾವನ್ನಪ್ಪಿದ್ದಂತ ಘಟನೆ ನಡೆದಿದೆ.

ಬೆಂಗಳೂರಿನ ಸಂಪಂಗಿ ರಾಮನಗರದ 7 ವರ್ಷದ ಬಾಲಕ ಆಡನ್ ಮೈಕಲ್ ಎಂಬಾತನಿಗೆ ಊಟ ಮಾಡುವಂತ ಸಂದರ್ಭದಲ್ಲಿ ಗಂಟಲು ನೋವು ಕಾಣಿಸಿಕೊಂಡಿತ್ತು.ಬೆಂಗಳೂರಲ್ಲಿ ವೈದ್ಯರ ಎಡವಟ್ಟಿಗೆ 7 ವರ್ಷದ ಬಾಲಕ ಸಾವು

ಈ ಹಿನ್ನಲೆಯಲ್ಲಿ ಸಿಂಧ್ಯಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.

ಆಡನ್ ಮೈಕಲ್ ಪರೀಕ್ಷೆ ಮಾಡಿದಂತ ವೈದ್ಯರು, ಆಪರೇಷನ್ ಮಾಡಬೇಕು ಅಂತ ಹೇಳಿದ್ದಾರೆ. ಅದಕ್ಕೆ ಕುಟುಂಬಸ್ಥರು ಒಪ್ಪಿಗೆ ಸೂಚಿಸಿದ್ದಾರೆ. ಸಿಂಧ್ಯಾ ಆಸ್ಪತ್ರೆಯ ಡಾ.ಶ್ವೇತಾ ಪೈ ಎಂಬುವರು ಬಾಲಕ ಆಡನ್ ಮೈಕಲ್ ಗೆ ಅನೆಸ್ತೇಷಿಯಾ ನೀಡಿದ್ದಾರೆ. ಹೀಗೆ ನೀಡಿದಂತ ಕೆಲವೇ ನಿಮಿಷದಲ್ಲಿ ಬಾಲಕ ಸಾವನ್ನಪ್ಪಿದ್ದಾನೆ.

ಇದನ್ನು ಮುಚ್ಚಿಕೊಳ್ಳೋದಕ್ಕೆ ಬಾಲಕನಿಗೆ ಹೃದಯ ಸಂಬಂಧಿ ಸಮಸ್ಯೆ ಇದೆ. ಅದು ಇದು ಅಂತ ಕಥೆ ಹೊಡೆದಿದ್ದಾರೆ. ಅನುಮಾನಗೊಂಡ ಪೋಷಕರು, ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲಿಸಿದಾಗ ಬಾಲಕ ಅನೆಸ್ತೇಷಿಯಾ ಓವರ್ ಡೋಸ್ ಆಗಿ ಸಾವನ್ನಪ್ಪಿದ್ದಾನೆ ಎನ್ನಲಾಗುತ್ತಿದೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಬಾಲಕನ ಮೃತದೇಹ ಕಳುಹಿಸಿಕೊಡಲಾಗಿದೆ. ಆ ವರದಿಯ ನಂತ್ರ ಬಾಲಕನ ಸಾವಿಗೆ ಖಚಿತ ಮಾಹಿತಿ ತಿಳಿದು ಬರಲಿದೆ.


Spread the love

About Laxminews 24x7

Check Also

ಜಾತಿಯ ಅಸಹನೆ ಇನ್ನೂ ಅದೆಷ್ಟರ ಮಟ್ಟಿಗೆ ಸಮಾಜದಲ್ಲಿ ಉಸಿರಾಡುತ್ತಿದೆ ಎನ್ನುವುದಕ್ಕೆ ನಿನ್ನೆ ಜರುಗಿದ ಬೆಳಗಾವಿ ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣಾ ಸಮಯದಲ್ಲಿ ಮಾಜಿ ಸಂಸದ #ರಮೇಶ_ಕತ್ತಿ ಆಡಿದ ದಾಷ್ಟ್ಯದ ಮಾತುಗಳು ಸಾಕ್ಷೀಕರಿಸುತ್ತವೆ

Spread the love ಜಾತಿಯ ಅಸಹನೆ ಇನ್ನೂ ಅದೆಷ್ಟರ ಮಟ್ಟಿಗೆ ಸಮಾಜದಲ್ಲಿ ಉಸಿರಾಡುತ್ತಿದೆ ಎನ್ನುವುದಕ್ಕೆ ನಿನ್ನೆ ಜರುಗಿದ ಬೆಳಗಾವಿ ಡಿಸಿಸಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ