ಬೆಂಗಳೂರು: ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಪಕ್ಕಾ ಗೆಲ್ತಾರೆ..ಬಿಜೆಪಿ ಅಭ್ಯರ್ಥಿ ಸುಧಾಕರ್ ಅವರು ಒಂದೇ ಒಂದು ಮತ ಹೆಚ್ಚು ಪಡೆದರೆ, ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರದೀಪ್ ಈಶ್ವರ್ ಸವಾಲು ಹಾಕಿದ್ದಾರೆ.
ಅಲ್ಲದೇ ತಮ್ಮ ರಾಜೀನಾಮೆ ಮಾತಿಗೆ ಬದ್ಧನಾಗಿರುತ್ತೇನೆ ಎಂದೂ ತಿಳಿಸಿದ್ದಾರೆ.
ಇತ್ತೀಚೆಗೆ ಮಾಜಿ ಸಚಿವ ಸುಧಾಕರ್ ಅವರು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಚಿಕ್ಕಬಳ್ಳಾಪುರದಲ್ಲಿ ಎಸ್‍ಎಸ್‍ಎಲ್‍ಸಿ ಫಲಿತಾಂಶ ಕುಸಿದಿದೆ ಎಂದಿದ್ದ ಮಾತಿಗೂ ಈಶ್ವರ್ ಟಕ್ಕರ್ ಕೊಟ್ಟಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,
ಈ ಸಲ 10ನೇ ತರಗತಿಯ ಪರೀಕ್ಷೆಗಳು ಕಟ್ಟುನಿಟ್ಟಾಗಿ ನಡೆದಿವೆ. ಸಿಸಿ ಕ್ಯಾಮೆರಾ ಹಾಕಿ ಪರೀಕ್ಷೆ ನಡೆಸಲಾಗಿದೆ. ಈ ಹಿಂದಿನಂತೆ ಮಾಸ್ ಕಾಪಿ ಹೊಡೆಯೋಕೆ ಬ್ರೇಕ್ ಹಾಕಲಾಗಿತ್ತು. ಹಾಗಾಗಿ ಈ ಸಲ ಮಾಸ್ ಕಾಪಿ ಆಗಿಲ್ಲ.
ಫಲಿತಾಂಶದಲ್ಲಿ ಈ ಬಾರಿ ಜಿಲ್ಲೆಯು 2ಸ್ಥಾನಕ್ಕೆ ಬಂದಿದೆ. ಹಿಂದೆ 5ನೇ ಸ್ಥಾನದಲ್ಲಿತ್ತು. ಆದ್ದರಿಂದ ಫಲಿತಾಂಶ ಕುಸಿದಿದೆ ಎನ್ನಬೇಡಿ ಎಂದು ಸುಧಾಕರ್ಗೆ ತಿರುಗೇಟು ನೀಡಿದ್ದಾರೆ.