Breaking News

ಕಂದನಿಗಾಗಿ ಕಾಯುತ್ತಿದ್ದ ಚಿರು, ಪತ್ನಿಗೆ ಗೊಂಬೆ ಗಿಫ್ಟ್

Spread the love

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರು ಅಪ್ಪನಾಗುತ್ತಿರುವ ಸಂಭ್ರಮದಲ್ಲಿದ್ದರು. ಆದರೆ ಮುದ್ದು ಕಂದ ಬರುವ ಮೊದಲೇ ಚಿರು ಇಹಲೋಕ ತ್ಯಜಿಸಿದ್ದಾರೆ.

ಚಿರಂಜೀವಿ ಸರ್ಜಾ ತಮ್ಮ ಮುದ್ದು ಕಂದನ ಬರುವಿಕೆಗಾಗಿ ಕಾತುರದಿಂದ ಕಾಯುತ್ತಿದ್ದರು. ಈ ಹಿನ್ನೆಲೆಯಲ್ಲಿ ಮುದ್ದು ಮಡದಿ ಮೇಘನಾಗೆ ಒಂದು ಗೊಂಬೆಯನ್ನು ಕೂಡ ಗಿಫ್ಟಾಗಿ ನೀಡಿದ್ದರು.

ಈಗ ಮೇಘನಾ ಚಿರು ಇಲ್ಲದ ಹೊತ್ತಲ್ಲಿ ಆ ಮುದ್ದಾದ ಬೊಂಬೆಯನ್ನು ನೋಡುತ್ತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಅಲ್ಲದೇ ಜೋಕಾಲಿ ಕಟ್ಟಿ ಬೊಂಬೆಗೆ ಲಾಲಿ ಹಾಡಿದ್ದಾರೆ. ಮುದ್ದು ಕಂದಮ್ಮನ ಮೇಲೆ ಎಷ್ಟು ಕನಸು, ಆಸೆಗಳನ್ನು ಇಟ್ಟುಕೊಂಡಿದ್ದರೂ ಎಂಬುದಕ್ಕೆ ಈ ಫೋಟೋ ಸಾಕ್ಷಿಯಾಗಿದೆ.

ಸದ್ಯಕ್ಕೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಬೆಂಗಳೂರಿನ ಬಸವನಗುಡಿಯಿಂದ ಕನಕಪುರ ಬಳಿಯಿರುವ ಧ್ರುವ ಸರ್ಜಾ ಫಾರ್ಮ್ ಹೌಸ್‍ಗೆ ಚಿರಂಜೀವಿ ಸರ್ಜಾ ಪಾರ್ಥಿವ ಶರೀರವನ್ನು ರವಾನಿಸಲಾಗಿದೆ. ಕುಟುಂಬಸ್ಥರು ಕೂಡ ಕಾರಿನಲ್ಲಿ ಫಾರ್ಮ್ ಹೌಸ್‍ಗೆ ಹೋಗಿದ್ದಾರೆ.

ಚಿರಂಜೀವಿ ಸಾವಿನ ಸುದ್ದಿ ತಿಳಿದ ನಂತರ ನಟಿ ತಾರಾ ಅಳುತ್ತಾ ಆಸ್ಪತ್ರೆಯ ಮುಂದೆ ಮಾಧ್ಯಮಗಳ ಜೊತೆ ಮಾತನಾಡುವಾಗ ಮೇಘನಾ ರಾಜ್ ಗರ್ಭಿಣಿಯಾಗಿರುವ ವಿಚಾರವನ್ನು ನೋವಿನಿಂದ ಹೇಳಿದ್ದರು. ಮೊದಲು ಸುಳ್ಳು ಸುದ್ದಿ ಅಂತಾ ತಿಳಿದೆ. ನಂತರ ಸುಳ್ಳು ಸುದ್ದಿ ಆಗಲಿ ಅಂತಾ ಅಂದುಕೊಂಡು ಆಸ್ಪತ್ರೆಗೆ ಬಂದೆ. ಆದ್ರೆ ಚಿರು ಹೃದಯಾಘಾತದಿಂದ ಸಾವನ್ನಪ್ಪಿರೋದು ಖಚಿತವಾಯ್ತು. ಚಿರು ಕುಟುಂಬಕ್ಕೆ ದೇವರು ದುಃಖ ಬರಿಸೋ ಶಕ್ತಿ ನೀಡಲಿ ಎಂದು ಕಣ್ಣೀರು ಹಾಕಿದ್ದರು.


Spread the love

About Laxminews 24x7

Check Also

ಸ್ನೇಹಿತರೊಂದಿಗೆ ಪಾನಿಪುರಿ ತಿನ್ನಲು ಹೋದವನ ಮೇಲೆ ಹಲ್ಲೆ ; ಚಿಕಿತ್ಸೆ ಫಲಿಸದೇ ಸಾವು

Spread the loveಬೆಂಗಳೂರು : ಪಾನಿಪುರಿ ತಿನ್ನಲು ಹೋದಾಗ ಹಲ್ಲೆಗೊಳಗಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ವರದಿಯಾಗಿದೆ. ನಂದಿನಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ