ಬೆಂಗಳೂರು: ರಾಜ್ಯ ಪೊಲೀಸ್ ಮಹಾನಿರ್ದೇಶಕ(DGP) ಪ್ರವೀಣ್ ಸೂದ್‍ಗೆ ಇದೀಗ ಕೊರೊನಾ ಭೀತಿ ಎದುರಾಗಿದೆ.
ಬಳ್ಳಾರಿಯ ಪೊಲೀಸ್ ಸಿಬ್ಬಂದಿಗೆ ಶನಿವಾರ ಕೊರೊನಾ ಸೋಂಕು ತಗುಲಿರುವುದು ಪತ್ತೆಯಾಗಿದ್ದು, ಇದರಿಂದಾಗಿ ಪ್ರವೀಣ್ ಸೂದ್ ಅವರಿಗೂ ಕೊರೊನಾ ಭೀತಿ ಎದುರಾಗಿದೆ. ಜಿಲ್ಲೆಯ ಹೊಸಪೇಟೆಯ ಮೂವರು ಪೊಲೀಸರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ.
ಎರಡು ದಿನಗಳ ಹಿಂದೆ ಪ್ರವೀಣ್ ಸೂದ್ ಬಳ್ಳಾರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದರು. 40ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಇವರ ಪೈಕಿ ಕೊರೊನಾ ಸೋಂಕಿತರಾದ ಟಿಬಿ ಡ್ಯಾಂನ ಸಿಪಿಐ ಕೂಡ ಇದ್ದರು. ಪ್ರವೀಣ್ ಸೂದ್ ಅವರು ಬಳ್ಳಾರಿ ಭೇಟಿಗೆ ಬಂದಾಗ ಟಿಬಿ ಡ್ಯಾಂ ಸಿಪಿಐ ಜೊತೆಯಲ್ಲಿಯೇ ಇದ್ದರು. ಹೀಗಾಗಿ ಪ್ರವೀಣ್ ಸೂದ್ ಅವರಿಗೂ ಇದೀಗ ಕೊರೊನಾ ಭೀತಿ ಎದುರಾಗಿದೆ.