ಬೆಳಗಾವಿ: ಜಿಲ್ಲೆಯಿಂದ ಗೋವಾ ರಾಜ್ಯಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಆರೋಪಿಸಿ ಕೆಲ ಕಿಡಿಗೇಡಿಗಳು ವಾಹನಕ್ಕೆ ಬೆಂಕಿ ಹಚ್ಚಿದ ಘಟನೆ ಕರ್ಲೇ- ಬೆಳವಟ್ಟಿ ಗ್ರಾಮದ ಮಧ್ಯೆ ನಡೆದಿದೆ.
ಗೋವಾ ರಾಜ್ಯಕ್ಕೆ ಮಾಂಸ ಸಾಗಾಟ ಮಾಡಲಾಗುತ್ತಿದೆ ಎಂದು ಕೆಲ ಹಿಂದೂ ಸಂಘಟನೆ ಕಾರ್ಯಕರ್ತರು ವಾಹನಕ್ಕಗಿ ಕಾಯುತ್ತಾ ನಿಂತಿದ್ದರು. ಕರ್ಲೇಯಿಂದ ಒಂದು ಕಿ.ಮೀ. ಅಂತರದಲ್ಲಿ ವಾಹನ ಬರುತ್ತಿದ್ದಂತೆ ತಡೆದು ವಾಹನಕ್ಕೆ ಬೆಂಕಿ ಹಚ್ಚಿ ಸುಡಲಾಗಿದೆ. ವಾಹನದಲ್ಲಿ ಇದ್ದವರು ಓಡಿ ಹೋಗಿದ್ದಾರೆ. ಬೆಳವಟ್ಟಿ ಮಾರ್ಗದಿಂದ ಗೋವಾಕ್ಕೆ ಈ ವಾಹನ ಹೊರಟಿತ್ತು ಎನ್ನಲಾಗಿದೆ.
ಶುಕ್ರವಾರ ರಾತ್ರಿ ಈ ಘಟನೆ ನಡೆದಿದ್ದು, ಇದನ್ನು ನೋಡಲು ಜನರು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.