ಹುಬ್ಬಳ್ಳಿ: ‘ಧಾರವಾಡ ಜಿಲ್ಲೆ ಅಳ್ನಾವರದಲ್ಲಿ ಗ್ರಾಮದೇವಿಯರ ಜಾತ್ರೆ ಪ್ರಯುಕ್ತ ಮೇ 12ರಂದು ಅಂತರರಾಷ್ಟ್ರೀಯ ಮಟ್ಟದ ಮುಕ್ತ ಕುಸ್ತಿ ಟೂರ್ನಿ ನಡೆಯಲಿದೆ’ ಎಂದು ಟೂರ್ನಿಯ ಆಯೋಜಕ ರಾಜು ಮಾರುತಿ ಪೆಜೋಳೆ ಹೇಳಿದರು.
‘ಇರಾನ್‌ನ ಮಿರ್ಜಾ, ಭಾರತ ಕೇಸರಿ ಜಸ್ಸಾ ಪಟ್ಟಿ, ಮಹಾರಾಷ್ಟ್ರ ಕೇಸರಿ ಸಿಖಂದರ್ ಶೇಖರ್ ಸೇರಿ 82 ಜೋಡಿಗಳು ಟೂರ್ನಿಯಲ್ಲಿ ಸೆಣಸಲಿವೆ’ ಎಂದು ಅವರು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
‘ವಿಜೇತರಿಗೆ ಪ್ರಥಮ ಬಹುಮಾನ ₹12 ಲಕ್ಷ, ದ್ವಿತೀಯ ₹8 ಲಕ್ಷ ಮತ್ತು ತೃತಿಯ ₹6.50 ಲಕ್ಷ ನಗದು ಮತ್ತು ಐವರಿಗೆ ಬೆಳ್ಳಿ ಗದೆ ನೀಡಲಾಗುವುದು. ಒಟ್ಟು ₹1.50 ಕೋಟಿ ನಗದು ಬಹುಮಾನ ವಿತರಿಸಲಾಗುವುದು. ಕುಸ್ತಿ ಪಂದ್ಯ ವೀಕ್ಷಣೆಗೆ ಬರುವವರಿಗೆ 30 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ’ ಎಂದರು.
Laxmi News 24×7