Home / ರಾಜಕೀಯ / ₹10.77 ಲಕ್ಷ ನಗದು, ₹16 ಲಕ್ಷ ಮೌಲ್ಯದ ಮದ್ಯ ವಶ

₹10.77 ಲಕ್ಷ ನಗದು, ₹16 ಲಕ್ಷ ಮೌಲ್ಯದ ಮದ್ಯ ವಶ

Spread the love

ಬಾಗಲಕೋಟೆ: ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ದಾಖಲೆ ಇಲ್ಲದ ಸಾಗಿಸುತ್ತಿದ್ದ ₹10.77 ಲಕ್ಷ ನಗದನ್ನು ನಾಯನೇಗಲಿ ಚೆಕ್‌ಪೋಸ್ಟ್‌ನಲ್ಲಿ ಸೋಮವಾರ ಜಪ್ತಿ ಮಾಡಲಾಗಿದೆ.

ಬಾಗಲಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಎಸ್‌ಟಿ ಹಾಗೂ ಪೊಲೀಸ್ ಇಲಾಖೆ ಜಂಟಿ ಕಾರ್ಯಾಚರಣೆ ವೇಳೆಯಲ್ಲಿ ಪ್ರತ್ಯೇಕ ಐದು ಪ್ರಕರಣಗಳಲ್ಲಿ ಐದು ಗೂಡ್ಸ್‌ ವಾಹನಗಳ ತಪಾಸಣೆ ಮಾಡಿ, ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಉಪವಿಭಾಗಾಧಿಕಾರಿ ಸಂತೋಷ ಜಗಲಾಸರ ತಿಳಿಸಿದ್ದಾರೆ.

₹10.77 ಲಕ್ಷ ನಗದು, ₹16 ಲಕ್ಷ ಮೌಲ್ಯದ ಮದ್ಯ ವಶ

ಮದ್ಯ ವಶ: ಜಿಪಿಎಸ್‌ ಅಳವಡಿಸದೆ ಮದ್ಯ ಸಾಗಿಸುತ್ತಿದ್ದ ಲಾರಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ₹16 ಲಕ್ಷ ಮೌಲ್ಯದ ಮದ್ಯ ವಶ ಮಾಡಿಕೊಳ್ಳಲಾಗಿದೆ.

ಕೆಎಸ್‌ಬಿಸಿಎಲ್‌ ಡಿಪೊದಲ್ಲಿದ್ದ ಲಾರಿಯಲ್ಲಿ 1,100 ಬಾಕ್ಸ್ ಬಿಯರ್‌ ಬಾಕ್ಸ್‌ಗಳನ್ನು ಸಾಗಿಸಲಾಗುತ್ತಿತ್ತು. ಖಚಿತ ಮಾಹಿತಿ ಮೇರೆಗೆ ದಾಖಲೆಗಳನ್ನು ಪರಿಶೀಲಿಸಿದಾಗ ಜಿಪಿಎಸ್‌ ಅಳವಡಿಸಿಕೊಳ್ಳದೆ ಸಾಗಿಸುತ್ತಿರುವುದು ಗೊತ್ತಾಗಿದೆ. ಲಾರಿ ವಶಕ್ಕೆ ಪಡೆದು, ಡಿಸ್ಟಲರಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.


Spread the love

About Laxminews 24x7

Check Also

ಜನರು ತಿಂಗಳುಗಟ್ಟಲೆ ಓಡಾಡಿದರು ವೀಸಾ ಸಿಗಲ್ಲ, ಪ್ರಜ್ವಲ್ ಗೆ ಒಂದೇ ದಿನದಲ್ಲಿ ಹೇಗೆ ಸಿಕ್ಕಿತು? : ವಿನಯ್ ಕುಲಕರ್ಣಿ

Spread the loveಹಾವೇರಿ : ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ