Breaking News

ಮೋದಿಗೆ ಬೈಯಲು ಹೈಕಮಾಂಡ್ ಆರ್ಡರ್ ಆಗಿದೆ”: ಸಂತೋಷ್ ಲಾಡ್ ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿಕೆ

Spread the love

ಹುಬ್ಬಳ್ಳಿ, ಮಾ.19: ಪ್ರಧಾನಿನರೇಂದ್ರ ಮೋದಿ(Narendra Modi) ಹಾಗೂ ತಮ್ಮ ವಿರುದ್ಧ ನಿತಂತರವಾಗಿ ಟೀಕಿಸುತ್ತಿರುವ ಸಚಿವ ಸಂತೋಷ್ ಲಾಡ್ (Santosh Lad) ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಟಾಂಗ್ ಕೊಟ್ಟಿರುವ ವಿಡಿಯೋ ವೈರಲ್ (Viral Video) ಆಗುತ್ತಿದೆ.

ಮೋದಿ ಅವರಿಗೆ ಯಾಕೆ ಬೈಯುತ್ತಿದ್ದೀಯಾ ಎಂದು ಕೇಳಿದಾಗ, ಸಚಿವ ಸ್ಥಾನ ಉಳಿಸಿಕೊಳ್ಳಲು ಬೈಯುತ್ತಿದ್ದೇವೆ ಎಂದು ಸಂತೋಷ್ ಲಾಡ್ ಹೇಳಿದ್ದಾಗಿ ಜೋಶಿ ಹೇಳುವುದನ್ನು ವಿಡಿಯೋದಲ್ಲಿ ಕಾಣಬಹುದು.

"ಮೋದಿಗೆ ಬೈಯಲು ಹೈಕಮಾಂಡ್ ಆರ್ಡರ್ ಆಗಿದೆ": ಸಂತೋಷ್ ಲಾಡ್ ಹೇಳಿದ್ದಾಗಿ ಪ್ರಲ್ಹಾದ್ ಜೋಶಿ ಹೇಳಿಕೆ

ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಪ್ರಲ್ಹಾದ್ ಜೋಶಿ, ವಿಮಾನದಲ್ಲಿ ನಾನು ಮತ್ತು ಸಂತೋಷ್ ಲಾಡ್ ಒಟ್ಟಿಗೆ ಬರುತ್ತಿದ್ದಾಗ, ಯಾಕಪ್ಪಾ ನನ್ನ ಮತ್ತು ಮೋದಿ ವಿರುದ್ಧ ಟೀಕೆ ಮಡುತ್ತಿದ್ದಿಯಾಲ್ಲ,

ನನ್ನನ್ನು ಬೈದರೆ ಸರಿ, ಮೋದಿಗೆ ಯಾಕೆ ಟೀಕೆ ಮಾಡುತ್ತಿದ್ದಿಯಾ ಎಂದು ಸಂತೋಷ್ ಲಾಡ್ ಅವರನ್ನು ಕೇಳಿದೆ. ಅದಕ್ಕೆ ಸಂತೋಷ್ ಲಾಡ್ ಹಿಂದಿಯಲ್ಲಿ, ಬೈಯದೆ ಇದ್ದರೆ ನನ್ನ ನೌಕರಿ ಹೋಗುತ್ತೆ.

ಈ ಬಗ್ಗೆ ಹೈಕಮಾಂಡ್ ಆರ್ಡರ್ ಆಗಿದೆ. ಆವಾಗಿನಿಂದ ನಾನು ತಲೆಕೆಡಿಸಿಕೊಂಡಿಲ್ಲ, ನೀವೂ ತಲೆ ಕೆಡಿಸಿಕೊಳ್ಳಬೇಡಿ ಎಂದು ಹೇಳಿದ್ದಾಗಿ ಜೋಶಿ ಹೇಳುವುದನ್ನು ಕೇಳಬಹುದು.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ