Breaking News

ಪ್ರತಾಪ್ ಸಿಂಹ ಅಲ್ಲ.. ಯದುವೀರ್ ಅಲ್ಲ.. ಮೈಸೂರಿನಿಂದ ಕಣಕ್ಕಿಳಿಯುತ್ತಾರಾ ಸುಮಲತಾ?

Spread the love

ಮೈಸೂರು, ಮಾರ್ಚ್ 12: ಲೋಕಸಭಾ ಚುನಾವಣೆ ಹತ್ತಿರಕ್ಕೆ ಬರುತ್ತಿದ್ದಂತೆ ಒಂದೊಂದು ಕ್ಷೇತ್ರದಲ್ಲಿಯೂ ಲೆಕ್ಕಾಚಾರಗಳು ಬದಲಾಗುತ್ತಿವೆ. ಇಷ್ಟು ದಿನ ಮಂಡ್ಯ ಇಂತಹ ಗೊಂದಲದಿಂದ ಸಕತ್ ಸುದ್ದಿಯಾಗುತ್ತಿತ್ತು. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಹಾಲಿ ಸಂಸದೆ ಸುಮಲತಾ ಅವರಿಗೆ ಟಿಕೆಟ್ ಕೈ ತಪ್ಪುವ ಭಯವಿದೆ.

ದೇ ಬೆನ್ನಲ್ಲೇ ಮೈಸೂರು ಕ್ಷೇತ್ರದಿಂದ ಅಚ್ಚರಿಯ ಬೆಳವಣಿಗೆಯೊಂದು ಸುದ್ದಿಯಾಗಿದೆ.ಹೌದು.. ಮೈಸೂರು – ಕೊಗಡು ಕ್ಷೇತ್ರಗಳ ಹಾಲಿ ಸಂಸದ ಪ್ರತಾಪ್ ಸಿಂಹ ಅವರಿಗೆ ಈ ಬಾರಿ ಟಿಕೆಟ್ ಕೈ ತಪ್ಪುವ ಭಯವಿದೆ. ಇದೇ ಕಾರಣಕ್ಕೆ ಪ್ರತಾಪ್ ಸಿಂಹ ಕೂಡ ಸಕತ್ ಆಕ್ಟಿವ್ ಆಗಿದ್ದು, ತಮ್ಮ ಕೆಲಸಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡುತ್ತಿದ್ದಾರೆ. ರಾಜ ವಂಶಸ್ಥ ಯದಿವೀರ್ ಒಡೆಯರ್ ಅವರಿಗೆ ಬಿಜೆಪಿ ಟಿಕೆಟ್ ಕೊಡುತ್ತದೆ ಎಂಬ ವಿಚಾರ ಚರ್ಚೆಯಾಗುತ್ತಿತ್ತು.

ಇವುಗಳ ನಡುವೆ ಮಂಡ್ಯ ಸಂಸದೆ ಸುಮಲತಾ ಅಂಬರೀಷ್ ಬಿಗ್ ಟ್ವಿಸ್ಟ್ ನೀಡುವ ಹೇಳಿಕೆ ನೀಡಿದ್ದಾರೆ. ಮಂಡ್ಯದಿಂದ ಸ್ಪರ್ಧಿಸ್ತಾರಾ ಸುಮಲತಾ ಅಂಬರೀಷ್!?ಎಂಪಿ ಸುಮಲತಾ ಅಂಬರೀಷ್ ಅವರು ಮಂಡ್ಯ ಬಿಟ್ಟು ಕೊಡುವುದಿಲ್ಲ ಎಂದು ಹಲವು ಬಾರಿ ಹೇಳಿದ್ದಾರೆ. ಮಂಡ್ಯದಿಂದ ನಾನೇ ಕಣಕ್ಕೆ ಇಳಿಯುವುದು ಎಂಬ ವಿಶ್ವಾಸದಲ್ಲಿದ್ದಾರೆ. ಆದರೆ, ಈ ಕ್ಷೇತ್ರ ಜೆಡಿಎಸ್ ಪಾಲಾಗುವುದನ್ನು ಯಾರು ಅಲ್ಲಗೆಳೆಯುತ್ತಿಲ್ಲ.

ಹೀಗಾಗಿಯೇ ಅವರನ್ನು ಒಲಿಸಿಕೊಳ್ಳಲು ಬಿಜೆಪಿ ಅವರಿಗೆ ಮೈಸೂರು ಆಫರ್ ನೀಡಿದೆ ಎಂಬ ಸುದ್ದಿಯಿದೆ. ಇದಕ್ಕೆ ಅವರು ಕೂಡ ಸುಳಿವು ನೀಡಿದ್ದಾರೆ.Sumalatha: ಮಂಡ್ಯದಲ್ಲಿ ಒಬ್ಬೊಂಟಿಯಾದ ಸಂಸದೆ ಸುಮಲತಾ ಅಂಬರೀಷ್!ಇತ್ತೀಚೆಗೆ ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತಾಡಿರುವ ಸಂಸದೆ ಸುಮಲತಾ ಅಂಬರೀಷ್​​, ತಮಗೆ ಮೈಸೂರು ಮತ್ತು ಬೆಂಗಳೂರು ಉತ್ತರದಿಂದ ನಿಲ್ಲುವಂತೆ ಬಿಜೆಪಿ ಆಫರ್ ನೀಡಿದೆ ಎಂಬುದನ್ನು ಹೇಳಿದ್ದಾರೆ. ರಾಜ್ಯ ಬಿಜೆಪಿ ನಾಯಕರು ಈ ಬಗ್ಗೆ ಆಫರ್ ನೀಡಿದ್ದಾರೆ ಎಂದು ಹೇಳಿವ ಮೂಲಕ ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಮತ್ತೊಬ್ಬ ಸ್ಪರ್ಧಿ ತಾನು ಎಂಬುದನ್ನು ಬಹಿರಂಗಪಡಿಸಿದ್ದಾರೆ. ಸುಮಲತಾ ಅವರಿಗೆ ಮಂಡ್ಯದಿಂದಲೇ ಟಿಕೆಟ್ ಸಿಗುತ್ತದೆಯೇ ಇಲ್ಲವೆ ಎಂಬುದು ಇನ್ನು ನಿರ್ಧಾರವಾಗಿಲ್ಲ.

ಇದರ ಬೆನ್ನಲ್ಲೇ ಅವರನ್ನು ಬಿಜೆಪಿ ಮೈಸೂರು ಅಥವಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಕಣಕ್ಕಿಳಿಸಲು ಯೋಜಿಸಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದು ಟಿಕೆಟ್ ನಿರೀಕ್ಷೆಯಲ್ಲಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಮತ್ತೊಂದು ತಲೆ ನೋವು ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.ಬಿಜೆಪಿ ಸರ್ವೆ ನಡೆಸಿದ್ದು ಸುಮಲತಾಗಾಗಿಯೇ?ಇನ್ನು, ಮೈಸೂರು-ಕೊಡಗು ಲೋಕಸಭಾ ಟಿಕೆಟ್‌ ಪ್ರತಾಪ್ ಸಿಂಹ ಅಥವಾ ಯದುವೀರ್ ಒಡೆಯರ್‌ ಇಬ್ಬರಲ್ಲಿ ಯಾರಾ ಪಾಲಾಗುತ್ತದೆ ಎನ್ನುವ ಚರ್ಚೆಗಳ ಮಧ್ಯೆಯೇ ಬಿಜೆಪಿ ಕ್ಷೇತ್ರದಲ್ಲಿ ಸರ್ವೆ ನಡೆಸಿರುವುದು ಬಹಿರಂಗವಾಗಿದೆ. 


Spread the love

About Laxminews 24x7

Check Also

ಫಿನಾಯಿಲ್ ಮಾರಾಟ ಮಾಡುತ್ತ ಚಿನ್ನದಂಗಡಿ ದೋಚಿದ್ದ ರಾಜಸ್ಥಾನಿ ಗ್ಯಾಂಗ್

Spread the loveಬೆಂಗಳೂರು : ಫಿನಾಯಿಲ್ ಸರಬರಾಜು ಮಾಡುತ್ತ ಚಿನ್ನದಂಗಡಿ ದೋಚಿದ್ದ ಐವರು ಆರೋಪಿಗಳನ್ನ ಕೆ. ಆರ್. ಪುರಂ ಠಾಣೆ ಪೊಲೀಸರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ