ಹುಬ್ಬಳ್ಳಿ : ಹಳೆಯ ಪ್ರಕರಣಗಳ ಆರೋಪದ ಮೇಲೆ ಅಯೋಧ್ಯ ಕರಸೇವಕ, ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿಯನ್ನು (Srikant pujari) ಬಂಧಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ (Police inspector) ಗೆ ಸರ್ಕಾರ ಕಡ್ಡಾಯ ರಜೆ ನೀಡಿ ಮನೆಗೆ ಕಳಿಸಿದೆ. ಶ್ರೀಕಾಂತ್ ಬಂಧನವನ್ನು ಖಂಡಿಸಿ ಬಿಜೆಪಿ (BJP)ಬುಧವಾರ ರಾಜ್ಯಾದ್ಯಂತ ಪ್ರತಿಭಟನೆ (Protest) ನಡೆಸಿತ್ತು.
ಶಹರ ಠಾಣೆಯ ಇನ್ಸ್‌ಪೆಕ್ಟರ್ ಮಹಮ್ಮದ್ ರಫೀಕ್‌ಗೆ ಸರ್ಕಾರ ಕಡ್ಡಾಯ ರಜೆ ನೀಡಿದೆ. ಅವರ ಜಾಗಕ್ಕೆ ಬಿ.ಎ. ಜಾಧವ್ ಅವರನ್ನು ಪ್ರಭಾರಿ ಠಾಣಾಧಿಕಾರಿಯಾಗಿ ನೇಮಿಸಿ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದಾರೆ.
ಡಿ. 29 ರಂದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು.