Breaking News

ಹುಬ್ಬಳ್ಳಿ: ಪ್ರತಿಷ್ಠಿತ ಹೋಟೆಲ್​ನಲ್ಲಿ ಮಹಿಳೆಗೆ ಕಿರುಕುಳ

Spread the love

ಹುಬ್ಬಳ್ಳಿ, ಡಿ.24: ಪ್ರತಿಷ್ಠಿತ ಹೋಟೆಲೊಂದರಲ್ಲಿ ಮಹಿಳೆಗೆ ಮೂವರು ಲೈಂಗಿಕ ಕಿರುಕುಳ ನೀಡಿರುವ ಘಟನೆ ನಡೆದಿದೆ. ಹುಬ್ಬಳ್ಳಿಯ (Hubli) ಅಮರಗೋಳ ಬಳಿ ಇರುವ ಪ್ರತಿಷ್ಠಿತ ರಾಯಲ್ ರಿಟ್ಜ್ ಹೋಟೆಲ್​ನಲ್ಲಿ (Royal Ridge Hotel) ಇದೇ ತಿಂಗಳ 2ನೇ ತಾರೀಖಿನಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಲೈಂಗಿಕ ಕಿರುಕುಳ ಹಿನ್ನಲೆ ಮೂವರ ವಿರುದ್ದ ಹುಬ್ಬಳ್ಳಿಯ APMC ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ನಡೆದು 20 ದಿನಗಳು ಕಳೆದರೂ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಸದ್ಯ ಹೊಸ ವರ್ಷಾಚರಣೆಗೆ ಕೆಲವೇ ದಿನಗಳು ಬಾಕಿ ಇದ್ದು ಹೋಟೆಲ್​ಗಳು ಎಷ್ಟು ಸೇಫ್ ಎಂಬ ಪ್ರಶ್ನೆ ಜನರಲ್ಲಿ ಮೂಡಿದೆ.

ಡಿಸೆಂಬರ್ 02ರಂದು ರಾಯಲ್ ರಿಟ್ಜ್ ಹೋಟೆಲ್​ನಲ್ಲಿ ಪಾರ್ಟಿ ಇವೆಂಟ್ ಆಯೋಜನೆ ಮಾಡಲಾಗಿತ್ತು. ಪಾರ್ಟಿ ಆಯೋಜವೆ ವೇಳೆ ಮೂವರು ವ್ಯಕ್ತಿಗಳು ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದರು. ಕೈ ಸನ್ನೆ ಮಾಡಿ ಲೈಂಗಿಕವಾಗಿ ಕಿರುಕುಳ ನೀಡಿದ್ದರು. ಅಷ್ಟೇ ಅಲ್ಲದೆ ಇವೆಂಟ್ ಮಗಿದ ಮೇಲೆ ಕಾರ್​ನಲ್ಲಿ ಮಹಿಳೆಯನ್ನು ಹಿಂಬಾಲಿಸಿದ್ದರು. ಲೈಂಗಿಕ ಕಿರಕುಳ ನೀಡಿದ ಅಜಯ್ ಕಲಾಲ್, ಸಲೀಮ್ ಬ್ಯಾಕೋಡ್, ಶಿವರಾಜ್ ಯಾದಗಿರಿ ವಿರುದ್ದ ಹುಬ್ಬಳ್ಳಿಯ APMC ಠಾಣೆಯಲ್ಲಿ ದೂರು ದಾಖಲಾಗಿದೆ. IPC -1860, 354/A, 354(D)34, 323 ಸೆಕ್ಷನ್ ಅಡಿಯಲ್ಲಿ ಕೇಸ್ ದಾಖಲಾಗಿದೆ.


Spread the love

About Laxminews 24x7

Check Also

ಸಿಎಂ ಫೋನ್ ಮಾಡಿ ಸಮಾಧಾನಪಡಿಸಿದ ಬಳಿಕ ಕರ್ತವ್ಯಕ್ಕೆ ಹಾಜರಾದ ASP ಭರಮನಿ

Spread the loveಧಾರವಾಡ/ಬೆಂಗಳೂರು: ಸ್ವಯಂ ನಿವೃತ್ತಿಗೆ ಕೋರಿಕೆ ಸಲ್ಲಿಸಿದ್ದ ಧಾರವಾಡ ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌.ವಿ.ಭರಮನಿ ಅವರು ಸಿಎಂ ಸಮಾಧಾನಪಡಿಸಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ