Breaking News

ಮಹಿಳೆ ಜೊತೆ ಅಸಭ್ಯ ವರ್ತನೆ,ಪಿಎಸ್‌ಐ ಅಮಾನತು

Spread the love

ಬೆಳಗಾವಿ, ಡಿ.25: ಮಹಿಳೆ ಜೊತೆ ಅಸಭ್ಯ ವರ್ತನೆ ಆರೋಪದಡಿ ಜಿಲ್ಲೆಯ ಹುಕ್ಕೇರಿ(Hukkeri)ತಾಲೂಕಿನ ಸಂಕೇಶ್ವರ ಪಟ್ಟಣ ಠಾಣೆಯ ಪಿಎಸ್‌ಐ ಅಮಾನತು ಮಾಡಲಾಗಿತ್ತು. ಈ ಹಿನ್ನಲೆ ಸಿಡಿದೆದ್ದ ಸಸ್ಪೆಂಡೆಡ್ ಪಿಎಸ್‌ಐ(Suspended PSI)ನರಸಿಂಹರಾಜು ತಮ್ಮ ಠಾಣೆಯಸಿಪಿಐ ಹಾಗೂ ಸಿಬ್ಬಂದಿವಿರುದ್ಧ ಕಿಡಿಕಾರಿದ್ದಾರೆ. ಸಂಕೇಶ್ವರ ಠಾಣೆ ಸಿಪಿಐ ಮತ್ತು ಕೆಲ ಸಿಬ್ಬಂದಿ ವಿರುದ್ಧ ಪಿಎಸ್‌ಐ ಗಂಭೀರ ಆರೋಪ ಮಾಡಿದ್ದಾರೆ. ನನ್ನ ವಿರುದ್ದ ಮಹಿಳೆ, ಸಿಪಿಐ, ಕೆಲ ಪೊಲೀಸ್ ಸಿಬ್ಬಂದಿ ಸೇರಿ ಷಡ್ಯಂತ್ರ ಮಾಡಿದ್ದಾರೆ ಎಂದಿದ್ದಾರೆ.

ತಂಗಿಯೆಂದು ಆ ಮಹಿಳೆಗೆ ಸಹಾಯ ಮಾಡಿದ್ದೆ ಎಂದ ಪಿಎಸ್​ಐ

ಸಂಕೇಶ್ವರದಲ್ಲಿ ಅಮಾನತುಗೊಂಡ ಪಿಎಸ್‌ಐ ನರಸಿಂಹರಾಜು ದಿಢೀರ್ ಸುದ್ದಿಗೋಷ್ಠಿ ನಡೆಸಿ, ‘ನಾಲ್ಕು ತಿಂಗಳ ಹಿಂದೆ ಅಕ್ಕ-ಪಕ್ಕದವರ ಜಗಳ ಸಂಬಂಧ ಮಹಿಳೆ ದೂರು ನೀಡಿದ್ದಳು. ಈ ವೇಳೆ ಆಕೆಯ ನಂಬರ್ ಪಡೆದು ನನ್ನ ನಂಬರ್ ನೀಡಿದ್ದೆ. ತನ್ನ ಮಗನಿಗೆ ಹೃದಯಸಂಬಂಧಿ ಕಾಯಿಲೆ ಇದೆ ಎಂದು ಸಹಾಯಕ್ಕೆ ಮನವಿ ಮಾಡಿದ್ದಳು. ತಂಗಿಯಾಗಿ, ಸ್ನೇಹಿತೆಯಾಗಿ ಒಳ್ಳೆಯ ಬಾಂಧವ್ಯದಿಂದ ಇದ್ದು, ಗೂಗಲ್ ಪೇ ಮೂಲಕ ಸಣ್ಣಪುಟ್ಟ ಹಣದ ಸಹಾಯ ಮಾಡಿದ್ದೇನೆ.

ಹುಕ್ಕೇರಿಯಲ್ಲಿ ಚಿನ್ನಾಭರಣ ಖರೀದಿಗೆ ಹಣ ಬೇಕು ವಾಪಸ್ ಕೊಡುತ್ತೇನೆ ಎಂದು ಪಡೆದಿದ್ದಳು. ಇದಾದ ಬಳಿಕ ಆ ಮಹಿಳೆಯ ಮತ್ತು ನನ್ನ ಮಧ್ಯೆ ಮುನಿಸು ಬಂತು, ಆಗ ಎಸ್‌ಪಿಗೆ ದೂರು ನೀಡುತ್ತೇನೆ ಎಂದಳು. ಡಿ.19ರ ರಾತ್ರಿ ಸಂಕೇಶ್ವರ ಸಿಪಿಐ ಶಿವಶರಣ ಅವಜಿ ಆ ಮಹಿಳೆ ಬಳಿ ಅರ್ಜಿ ಪಡೆಯುವ ಮಾಹಿತಿ ಬಂತು, ಆಕೆಯ ಬಳಿ ಸಿಪಿಐ ಶಿವಶರಣ ಅವಜಿ ಅರ್ಜಿ ಪಡೆದು ಅದನ್ನು ಎಸ್‌ಪಿ ಸಾಹೇಬ್ರಿಗೆ ಕಳಿಸಿದರು. ಎಸ್‌ಪಿ ಸಾಹೇಬ್ರು ಒಂದೇ ದಿನದಲ್ಲಿ ಅಮಾನತು ಮಾಡಿದ್ದಾರೆ. ಆಕೆ ಪೊಲೀಸ್ ಠಾಣೆಗೆ ಬಂದಿಲ್ಲ, ಅವರ ಮನೆಗೆ ಹೋಗಿ ಸಿಪಿಐ ದೂರು ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಸಿಪಿಐ ಹಾಗೂ ನಮ್ಮ ಮಧ್ಯೆ ವೈಮನಸ್ಸು

ಸಂಕೇಶ್ವರ ಠಾಣೆ ಸಿಬ್ಬಂದಿ ಉಪಯೋಗಕ್ಕೆ ಲ್ಯಾಪ್ ಟಾಪ್ ಸೇರಿ ಇತರ ಉಪಕರಣ ಬೇಕಾಗಿ ಸ್ಥಳೀಯ ಫ್ಯಾಕ್ಟರಿಗೆ ರಿಕ್ವೆಸ್ಟ್ ಕೊಟ್ಟಿದೇವು, ಆಗ ಸಿಪಿಐ ಮೂರು ಲಕ್ಷ ರೂ ವೆಚ್ಚದಲ್ಲಿ ತಮ್ಮ ಛೇಂಬರ್ ನವೀಕರಣ ಮಾಡಿ ಎಸಿ ಹಾಕಿಸಿಕೊಂಡರು. ಇದನ್ನು ಪ್ರಶ್ನಿಸಿದ್ದಕ್ಕೆ ಸಿಪಿಐ ಹಾಗೂ ನಮ್ಮ ಮಧ್ಯೆ ವೈಮನಸ್ಸು ಬಂತು. ಈ ಉದ್ದೇಶಕ್ಕಾಗಿ ಮಹಿಳೆ ಬಳಿ ದೂರು ಪಡೆದು ಅಮಾನತು ಮಾಡಿಸಿದ್ದಾರೆ ಎಂದು ಸಿಪಿಐ ವಿರುದ್ದ ಗಂಭೀರ ಆರೋಪ ಮಾಡಿಸಿದ್ದಾರೆ.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ