Breaking News

ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ.:ಅನಂತ್​ ಕುಮಾರ್​ ಹೆಗಡೆ

Spread the love

ಸಿದ್ದರಾಮಯ್ಯನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ. ಸಿದ್ದರಾಮಯ್ಯನವರ ದುರಂಹಕಾರಿ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಕರ್ನಾಟಕದಲ್ಲಿ ಹಿಂದು ವಿರೋಧಿ ಸರ್ಕಾರ ಇರಲು ಸಾಧ್ಯವೇ ಇಲ್ಲ. ಕಾಂಗ್ರೆಸ್​ನವರು ಬದುಕಬೇಕು ಎಂದರೇ ಮುಸ್ಲಿಂರ ಹಿಜಾಬನ್ನು ಹಿಡಿದುಕೊಂಡೇ ಓಟು ತಗೋಬೇಕು ಎಂದು ಸಂಸದ ಅನಂತ್​ ಕುಮಾರ್​ ಹೆಗಡೆ ಕಿಡಿಕಾರಿದ್ದಾರೆ.

ಉತ್ತರ ಕನ್ನಡ, ಡಿ.24: ಸಿದ್ದರಾಮಯ್ಯ(Siddaramaiah)ನವರಿಗೆ ದಮ್ಮ ಇದ್ರೆ ಹಿಂದೂ ರಾಷ್ಟ್ರ ಆಗೋದನ್ನ ತಡೆಯಲಿ ಎಂದು ಬಿಜೆಪಿ ಸಂಸದ ಅನಂತ್​ ಕುಮಾರ್​ ಹೆಗಡೆ (Anantkumar Hegde) ಕಿಡಿಕಾರಿದ್ದಾರೆ. ಶಿರಸಿ(Sirsi)ಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ‘ ಹಿಜಾಬಿನ ಹಿಂದೆ ತಿರುಗುವ ಈ ಸರ್ಕಾರಕ್ಕೆ ಹೆಚ್ಚು ದಿನ ಉಳಿಗಾಲವಿಲ್ಲ.

ಹುಚ್ಚು ಮಹಮದ್​ನ ಸರ್ಕಾರ. ಅಲ್ಪ ಸಂಖ್ಯಾತರ ಓಟುಗಳು ಇಲ್ಲದೇ ಕಾಂಗ್ರೆಸ್ ಬದುಕಲು ಸಾಧ್ಯವಿಲ್ಲ. ಯಾವತ್ತೂ ಕಾಂಗ್ರೆಸ್ ಬಹುಸಂಖ್ಯಾತರ ರಾಜಕಾರಣ ಮಾಡಿಲ್ಲ,ಅವರ ಮನಸ್ಸಿಗೆ ಬಂದಂತೆ ರಾಜಕಾರಣ ಮಾಡುತಿದ್ದಾರೆ ಎಂದು ಕಾಂಗ್ರೆಸ್​ ವಿರುದ್ದ ಹರಿಹಾಯ್ದಿದ್ದಾರೆ.

ಈ ರಾಜ್ಯವನ್ನು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ತೊಂದರೆಗೀಡು ಮಾಡಿದ ವ್ಯಕ್ತಿಯ ಹೆಸರನ್ನೇ ತೆಗದುಕೊಂಡು ಕಾಂಗ್ರೆಸ್ ರಾಜಕಾರಣ ಮಾಡುತ್ತೆ ಎಂದರೇ ಕಾಂಗ್ರೆಸ್​ಗೆ ಮುಂದಿನ ದಿನ ಜನತೆ ಹೇಗೆ ಉತ್ತರ ಕೊಡುತ್ತೆ ಎಂಬುದನ್ನು ಯೋಚನೆ ಮಾಡಬೇಕು. ಸಿದ್ದರಾಮಯ್ಯ ಅವರು ‘ಯಾರು ಬೇಕಾದರೂ, ಏನು ಬೇಕಾದರೂ ಡ್ರೇಸ್​ ಹಾಕಿಕೊಂಡು ಹೋಗಬಹುದು ಎಂಬ ಹೇಳಿಕೆಗೆ ಉತ್ತರಿಸಿದ ಅವರು ‘ ಇವರ ಹೇಳಿಕೆ ಮುಂದಿನ ದಿನ ಆತಂಕಕಾರಿ ಬೆಳವಣಿಗೆಗೆ ಕಾರಣ ಆಗುತ್ತೆ. ನಮ್ಮವರು ಕೇಸರಿ ಶಾಲು ಹಾಕಿಕೊಂಡು ಹೋಗುತ್ತಾರೆ, ಅವರು ಹಿಜಾಬ್ ಹಾಕಿಕೊಂಡು ಹೋಗ್ತಾರೆ ಎಂದರು.


Spread the love

About Laxminews 24x7

Check Also

ಮೃತ ಸರ್ಕಾರಿ ವೈದ್ಯಾಧಿಕಾರಿ ಕೊಠಡಿಯಲ್ಲಿ ಮಾಟಮಂತ್ರ: ಸಾವಿನ ಸುತ್ತ ಅನುಮಾನದ ಹುತ್ತ

Spread the loveಕೋಲಾರ, ಜುಲೈ 07: ಜಿಲ್ಲೆ ಮಾಲೂರು ತಾಲ್ಲೂಕಿನ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಸಂತ್ ಕುಮಾರ್ ಅವರು ತಮ್ಮ ಉತ್ತಮ ಸೇವೆಯಿಂದಲೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ