Breaking News

ಕೌಟುಂಬಿಕ ಕಲಹ ಅಣ್ಣನಿಂದ ತಮ್ಮನ ಹತ್ಯೆ

Spread the love

ಹುಬ್ಬಳ್ಳಿ: ಒಡಹುಟ್ಟಿದ ಅಣ್ಣನೇ ತಮ್ಮನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಹುಬ್ಬಳ್ಳಿಯ ವಿಜಯನಗರದಲ್ಲಿ ಇಂದು ನಡೆದಿದೆ.

ಮೃತ ವ್ಯಕ್ತಿಯನ್ನು ಪವನ್ ಕಟವಾಟೆ (30) ಎಂದು ಗುರುತಿಸಲಾಗಿದೆ. ರಾಜು ಕೊಲೆಗೈದ ಆರೋಪಿ.

ಪವನ್ ಮನೆ ಬಿಟ್ಟು ಹುಬ್ಬಳ್ಳಿಯ ವಿಜಯನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ. ಹೀಗಿದ್ದರೂ ಮದ್ಯ ಸೇವಿಸಿ ಅಣ್ಣನ ಜೊತೆ ಜಗಳವಾಡುತ್ತಿದ್ದ ಎಂದು ತಿಳಿದುಬಂದಿದೆ. ಬುಧವಾರ ಪವನ್​ ಅಣ್ಣನ ಮನೆಗೆ ಬಂದು ಕ್ಯಾತೆ ತೆಗೆದಿದ್ದಾನೆ. ಇದರಿಂದ ಕೋಪಗೊಂಡ ರಾಜು, ತಡರಾತ್ರಿ ಪವನ್​ ಮನೆಗೆ ಬಂದು ಮಲಗಿದ್ದಾಗ ಕುತ್ತಿಗೆಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ಷುಲ್ಲಕ ಕಾರಣಕ್ಕೆ ಯುವಕ ಕೊಲೆ-ಇಬ್ಬರ ಬಂಧನ: ರಾಯಚೂರಿನಲ್ಲಿಕ್ಷುಲ್ಲಕ ಕಾರಣಕ್ಕೆ ಯುವಕನನ್ನು ಕೊಲೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಲಿಂಗಸುಗೂರು ಪೊಲೀಸರು ಬಂಧಿಸಿದ್ದರು. ಬಂಧಿತರನ್ನು ಲಿಂಗಸುಗೂರು ತಾಲೂಕಿನ ಗುಡದನಾಳ ಗ್ರಾಮದ ಶಿವಪುತ್ರ ಅಲಿಯಾಸ್ ಶಿವು, ಅಭಿಷೇಕ ಅಲಿಯಾಸ್ ಅಭಿ ಎಂದು ಗುರುತಿಸಲಾಗಿತ್ತು. ಆರೋಪಿಗಳು ಸ್ನೇಹಿತ ಶರಣಬಸವನನ್ನು (21) ಕೊಲೆ ಮಾಡಿದ್ದರು.

ಶರಣಬಸವ, ಅಭಿಷೇಕ, ಶಿವಪುತ್ರ ಮೂವರು ಸ್ನೇಹಿತರು. ಇವರು ಆಗಾಗ ಜೂಜಾಟ ಆಡುತ್ತಿದ್ದರು. ಹಣ ಕಳೆದುಕೊಂಡಾಗ ಮತ್ತು ಗೆದ್ದಾಗ ಪರಸ್ಪರ ಜಗಳವಾಡುತ್ತಿದ್ದರು. ಮೊಹರಂ ಹಾಗೂ ಹಬ್ಬ ಹರಿದಿನಗಳಲ್ಲಿ ಒಟ್ಟಿಗೆ ಸೇರಿದಾಗ ನಾ ಮೇಲು, ನೀ ಮೇಲು ಎಂದು ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಿದ್ದರು. ಆದರೆ, ಈ ಸಣ್ಣಪುಟ್ಟ ಜಗಳಗಳಿಂದಲೇ ದ್ವೇಷ ಭಾವನೆ ಮೂಡಿ ಕೊಲೆ ಮಾಡುವ ಹಂತಕ್ಕೆ ತಲುಪಿತ್ತು.


Spread the love

About Laxminews 24x7

Check Also

ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಮಾಡಿದ ಶಾಸಕ ಅರವಿಂದ ಬೆಲ್ಲದ.

Spread the love ಧಾರವಾಡ 10ನೇವಾರ್ಡನ್ ಶಿವಶಕ್ತಿ ನಗರದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ.. 41 ಕುಟುಂಬಗಳಿಗೆ ಹಕ್ಕು ಪತ್ರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ