Breaking News

ವೃತ್ತಿ ರಂಗಭೂಮಿ ಉಳಿಸಿ ಬೆಳೆಸಬೇಕಿದೆ- ಕಾಮನ್‌

Spread the love

ತೆಲಸಂಗ: ವೃತ್ತಿ ರಂಗಭೂಮಿ ಇಂದು ಸೋತು ಸುಣ್ಣವಾಗಿದ್ದು, ಅದೆಷ್ಟೋ ವೃತ್ತಿ ನಾಟಕ ಕಂಪನಿಗಳು ಬಾಗಿಲು ಮುಚ್ಚಿ ಕೇವಲ ಬೆರಳೆಣಿಕೆಯಷ್ಟೇ ಈಗ ಉಳಿದುಕೊಂಡಿವೆ. ವೃತ್ತಿರಂಗಭೂಮಿಗೆ ಕಾಯಕಲ್ಪ ಕೊಡುವುದು ಹೇಗೆಂದು ಚಿಂತಿಸಬೇಕಿದೆ ಎಂದು ಹವ್ಯಾಸಿ ಕಲಾವಿದ ಡಾ| ಬಿ.ಎಸ್‌.ಕಾಮನ್‌ ಹೇಳಿದರು.

 

ಗ್ರಾಮದಲ್ಲಿ ದುರ್ಗಾದೇವಿ ಜಾತ್ರೆ ನಿಮಿತ್ತ ಹಮ್ಮಿಕೊಂಡ ನಾಟಕ ಪ್ರದರ್ಶನದಲ್ಲಿ ಡಾ| ಪಂ| ಪುಟ್ಟರಾಜ ಕವಿ ಗವಾಯಿಗಳ ರಂಗ
ಸಂಸ್ಥೆಯಿಂದ ವೃತ್ತಿ ರಂಗಭೂಮಿ ಕಲಾವಿದರನ್ನು ಸತ್ಕರಿಸಿ ಅವರು ಮಾತನಾಡಿ, ರಂಗಭೂಮಿಗೆ ಪುರಾತನ ಇತಿಹಾಸವಿದೆ. ಮೈಸೂರು ಕಂಠೀರವ ನರಸರಾಜರ (1638-59) ಅರಮನೆಯಲ್ಲಿ ಮನೋಹರವಾದ ನಾಟಕಶಾಲೆ ಇತ್ತೆಂದು ಆ ರಾಜರ ಚರಿತ್ರೆಯನ್ನು ರಚಿಸಿದ ಗೋವಿಂದ ವೈದ್ಯ ತನ್ನ ಕಾವ್ಯದಲ್ಲಿ ಹೇಳಿದ್ದಾನೆ.

ಗ್ರಾಮೀಣ ಪ್ರದೇಶದಲ್ಲಿ ವರ್ಷಕ್ಕೊಂದು ಸಾರಿ ಊರ ಗ್ರಾಮದೇವತೆಯ ಜಾತ್ರೆಯ ಸಂದರ್ಭದಲ್ಲಿ ಊರಿನ ಕಲಾವಿದರೆಲ್ಲ ಸೇರಿ ನಾಟಕ ಆಡುವ ಪರಂಪರೆ ಈಗಲೂ ಮುಂದುವರೆದಿದೆ.

ಇದನ್ನೇ ಜಾನಪದ ರಂಗಭೂಮಿ ಎಂದು ಕರೆದರೆ, ರಂಗಭೂಮಿಯನ್ನೇ ವೃತ್ತಿಯನ್ನಾಗಿ ಮಾಡಿಕೊಂಡು ಜೀವನ ನಿರ್ವಹಣೆ ಮಾಡುವ ಅನೇಕ ಕಲಾವಿದರು, ಕಂಪನಿಗಳನ್ನು ಕಾಣುತ್ತೇವೆ. ಆದರೆ ಇಂದು ವೃತ್ತಿ ನಾಟಕ ಕಂಪನಿಗಳ ಮತ್ತು ಕಲಾವಿದರ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ. ಕಲಾವಿದರ ಕಲಾ ತಪಸ್ಸಿನ ಪರಿಣಾಮವಾಗಿ ರಂಗಭೂಮಿ ಕಾಲಕ್ಕೆ ತಕ್ಕಂತೆ ರೂಪಾಂತರದೊಂದಿಗೆ ಸಶಕ್ತವಾಗಿ ಮತ್ತಷ್ಟು ವಿನೂತನವಾಗಿ ಬೆಳೆಯುತ್ತಿರುವುದು ಹೆಮ್ಮೆಯ ಸಂಗತಿ. ಟಿವಿ ಮಾಧ್ಯಮ, ಸಿನಿಮಾರಂಗದಿಂದ ರಂಗಭೂಮಿ ಕತೆ ಮುಗಿದೇ ಹೋಯಿತು ಎಂದು ಹಲವು ಮಂದಿ ವಾದ ಮಂಡಿಸಿದ್ದರು. ಆದರೆ ರಂಗಭೂಮಿ ನಿಂತ ನೀರಾಗಲೇ ಇಲ್ಲ. ಸಮೃದ್ಧವಾಗಿ ಹಬ್ಬುತ್ತಾ ಸಮಾಜ ಕಟ್ಟುತ್ತಲೇ ಹೊರಟಿದೆ. ಹೀಗಾಗಿ ರಂಗಭೂಮಿಯನ್ನು
ಉಳಿಸಿ ಬೆಳೆಸೋಣ ಎಂದು ಕರೆ ನೀಡಿದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ