Breaking News

ಸಂಸತ್​​ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮತ್ತೊಬ್ಬ ಟೆಕ್ಕಿ ಪೊಲೀಸರ ವಶಕ್ಕೆ

Spread the love

ಬಾಗಲಕೋಟೆ: ಸಂಸತ್​​ ಭದ್ರತಾ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆಯಲ್ಲಿ ಮತ್ತೊಬ್ಬ ಟೆಕ್ಕಿಯನ್ನು ದೆಹಲಿ ಪೊಲೀಸರು ಬುಧವಾರ ರಾತ್ರಿ​ ವಶಕ್ಕೆ ಪಡೆದಿದ್ದಾರೆ.

30 ವರ್ಷದ ಸಾಯಿಕೃಷ್ಣ ಜಗಲಿ ವಶಕ್ಕೆ ಪಡೆಯಲಾದ ಟೆಕ್ಕಿ ಆಗಿದ್ದಾರೆ. ಸದ್ಯ ದೆಹಲಿ ಪೊಲೀಸರು ಆತನನ್ನು ವಿಚಾರಣೆ ನಡೆಸುತ್ತಿದ್ದಾರೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ಧಾರೆ.

ಪ್ರಕರಣದ ಬಗ್ಗೆ ಎಸ್​​​​ಪಿ ಹೇಳಿದ್ದಿಷ್ಟು: ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ, ದೆಹಲಿಯಿಂದ ನಾಲ್ಕು ಜನ ಪೊಲೀಸರು ಬಂದು ಸಾಯಿಕೃಷ್ಣನನ್ನು ವಿಚಾರಣೆಗೆಂದು ಕರೆದುಕೊಂಡು ಹೋಗಿದ್ದಾರೆ‌. ಹೈದರಾಬಾದ್ ಮೂಲಕ ದೆಹಲಿಗೆ ತೆರಳಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಾಯಿಕೃಷ್ಣ ತಂದೆ ಪ್ರತಿಕ್ರಿಯೆ: ದೆಹಲಿ ಪೊಲೀಸರ ವಶದಲ್ಲಿರುವ ಸಾಯಿಕೃಷ್ಣ ತಂದೆಯಾಗಿರುವ ನಿವೃತ್ತ ಡಿವೈಎಸ್​​​​ಪಿ ವಿಠಲ್​ ಜಗಲಿ ಅವರು ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ. ”ತಮ್ಮ ಪುತ್ರನನ್ನು ವಿಚಾರಣೆಗಾಗಿ ಕರೆದುಕೊಂಡು ಹೋಗುತ್ತೇವೆ ಎಂದು ಮಾಹಿತಿ ನೀಡಿ, ಕರೆದುಕೊಂಡು ಹೋಗಿದ್ದಾರೆ. ಇಬ್ಬರು ರೂಮ್​​ಮೇಟ್​​​​​​ಗಳು​ ಆಗಿದ್ದರಿಂದ ಇಬ್ಬರ ಸಮಕ್ಷಮ ವಿಚಾರಣೆ ಮಾಡಲಿದ್ದಾರೆ. ಮತ್ತೆ ಎರಡು ದಿನದಲ್ಲಿ ವಾಪಸ್​ ಕಳುಹಿಸಲಿದ್ದಾರೆ. ಬಂದ ನಂತರ ಇಬ್ಬರು ಸೇರಿ ಸಮಗ್ರ ಮಾಹಿತಿ ನೀಡುತ್ತೇವೆ” ಎಂದು ತಿಳಿಸಿದರು.

ಸಹೋದರಿಯ ಪ್ರತಿಕ್ರಿಯೆ: ಈ ಬಗ್ಗೆ ಸಾಯಿಕೃಷ್ಣ ಸಹೋದರಿ ಮಾತನಾಡಿದ್ದು, ”ದೆಹಲಿಯಿಂದ ಇಲ್ಲಿಗೆ ಪೊಲೀಸರು ಆಗಮಿಸಿದ್ದರು. ಕೆಲ ಸಮಯ ವಿಚಾರಣೆ ನಡೆಸಿದರು. ವಿಚಾರಣೆ ವೇಳೆ ಪೊಲೀಸರು ಕೇಳಿದ ಪ್ರಶ್ನೆಗೆ ಸಾಯಿಕೃಷ್ಣ ಸರಿಯಾಗಿ ಮಾಹಿತಿ ನೀಡಿದ. ಆದರೆ, ಹೆಚ್ಚಿನ ಮಾಹಿತಿ ಅವಶ್ಯಕತೆ ಇರುವುದರಿಂದ ಸಾಯಿಕೃಷ್ಣನನ್ನು ದೆಹಲಿಗೆ ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ಪೊಲೀಸರು ತಿಳಿಸಿದರು. ನಾವು ಕರೆದುಕೊಂಡು ಹೋಗುವಂತೆ ಹೇಳಿದೆವು.


Spread the love

About Laxminews 24x7

Check Also

ರಾಜ್ಯಪಾಲರ ಭಾಷಣದ ಮೊದಲ 11 ಪ್ಯಾರಾಗಳಲ್ಲಿ ವಿಬಿ ಜಿ ರಾಮ್​ ಜಿ ಕಾಯ್ದೆ ಟೀಕಿಸಿ ಕೇಂದ್ರ ಸರ್ಕಾರದ ವಿರುದ್ಧ ಕಟು ಟೀಕೆ

Spread the loveಬೆಂಗಳೂರು : ರಾಜ್ಯಪಾಲರು ಹಾಗೂ ಸರ್ಕಾರದ ಸಂಘರ್ಷದ ಮಧ್ಯೆ ರಾಜ್ಯಪಾಲರ ಭಾಷಣವನ್ನು ಸದನದಲ್ಲಿ ಮಂಡಿಸಲಾಯಿತು. ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ