ಬೆಳಗಾವಿ: ಇಲ್ಲಿನ ವಂಟಮೂರಿ ಎಂಬಲ್ಲಿ ಮಹಿಳೆಯನ್ನು ವಿವಸ್ತ್ರಗೊಳಿಸಿ ಹಲ್ಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮೂವರು ಪ್ರಮುಖ ಆರೋಪಿಗಳನ್ನು ಸಿಐಡಿ ತಂಡವು ಕಸ್ಟಡಿಗೆ ತೆಗೆದುಕೊಂಡು ತನಿಖೆ ಆರಂಭಿಸಿದೆ.
ಬೆಳಗಾವಿಯ ನಾಲ್ಕನೇ ಜೆಎಂಎಫ್‌ಸಿ ನ್ಯಾಯಾಲಯ ಈ ಕುರಿತು ಆದೇಶ ಹೊರಡಿಸಿದೆ.
ಮೊದಲನೇ ಆರೋಪಿ ಬಸಪ್ಪ ರುದ್ರಪ್ಪ ನಾಯಕ, ಎರಡು ಮತ್ತು ಮೂರನೇ ಆರೋಪಿಗಳಾದ ರಾಜು ರುದ್ರಪ್ಪ ನಾಯಕ, ಶಿವಪ್ಪ ರಾಯಪ್ಪ ವಣ್ಣೂರ ಅವರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಅಜ್ಞಾತ ಸ್ಥಳದಲ್ಲಿ ಆರೋಪಿಗಳನ್ನು ಅಧಿಕಾರಿಗಳ ತಂಡ ವಿಚಾರಣೆ ನಡೆಸುತ್ತಿದೆ.
ಕಳೆದ ಕೆಲವು ದಿನಗಳ ಹಿಂದೆ ಜೋಡಿಯೊಂದು ಪರಾರಿಯಾದ ಕಾರಣಕ್ಕೆ ಯುವಕನ ತಾಯಿಯ ಮೇಲೆ ಆರೋಪಿಗಳು ಅಮಾನವೀಯವಾಗಿ ಹಲ್ಲೆ ನಡೆಸಿದ್ದರು. ಈ ಘಟನೆ ದೇಶಾದ್ಯಂತ ಸುದ್ದಿಯಾಗಿತ್ತು. ರಾಜ್ಯ ಸರ್ಕಾರ ಪ್ರಕರಣವನ್ನು ಸಿಐಡಿಗೆ ವಹಿಸಿದೆ.
Laxmi News 24×7