Breaking News

ಮೈಸೂರಲ್ಲಿ ಕೋವಿಡ್​ ಆತಂಕ

Spread the love

ಮೈಸೂರು: ಕೇರಳದಲ್ಲಿ ಕೋವಿಡ್ ರೂಪಾಂತರಿ ಜೆಎನ್.1 ಪ್ರಕರಣ ವರದಿಯಾದ ಹಿನ್ನೆಲೆ ಹೆಚ್​ಡಿ ಕೋಟೆ ತಾಲೂಕಿನ ಬಾವಲಿ ಚೆಕ್​ ಪೋಸ್ಟ್​ಗೆ ತಾಲೂಕು ಆರೋಗ್ಯಾಧಿಕಾರಿ ಡಾ ರವಿಕುಮಾರ್.ಟಿ.

ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಆರೋಗ್ಯಾಧಿಕಾರಿ ಡಾ ರವಿಕುಮಾರ್​ ಮಾತನಾಡಿ, “ಕೇರಳದ ವಯನಾಡ್ ಜಿಲ್ಲೆಯಲ್ಲಿ ಕೋವಿಡ್​ ಪ್ರಕರಣಗಳು ಕಂಡುಬಂದ ಹಿನ್ನೆಲೆ ಇಂದು ಹೆಚ್​ಡಿ ಕೋಟೆಯ ಬಾವಲಿ ಚೆಕ್​ ಪೋಸ್ಟ್​ಗೆ ಆಗಮಿಸಿ ಪರಿಶೀಲನೆ ನಡೆಸಿದ್ದೇನೆ. ನಾಳೆಯಿಂದ ಬೆಳಗ್ಗೆ 6 ಗಂಟೆಯಿಂದ ಮಧ್ಯಾಹ್ನ 2 ಗಂಟೆ ವರೆಗೆ ಹಾಗೂ 2 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಸ್ಕ್ರೀನಿಂಗ್​ ಮಾಡಲು ಸಿಬ್ಬಂದಿ ನಿಯೋಜಿಸಲಾಗುತ್ತದೆ. ಇಲ್ಲಿಂದ ಕೇರಳಕ್ಕೆ ಕೆಲಸಕ್ಕೆ ತೆರಳುವ ಕೂಲಿ ಕಾರ್ಮಿಕರ ಮೇಲೆ ನಿಗಾ ವಹಿಸಿ, ಅವರಲ್ಲಿ ಯಾವುದೇ ಕೋವಿಡ್​ ಲಕ್ಷಣಗಳು ಕಂಡು ಬಂದರೆ ಪರೀಕ್ಷೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದೇನೆ” ಎಂದರು.

“ಕೇರಳದ ಗಡಿ ಭಾಗದಲ್ಲಿರುವ ಗ್ರಾಮಗಳಲ್ಲಿನ ಜನರಿಗೆ ಕರಪತ್ರದ ಮೂಲಕ ಕೋವಿಡ್​ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದ್ದೇನೆ. ಅರಣ್ಯ ಮತ್ತು ಪೊಲೀಸ್​ ಇಲಾಖೆಯ ಸಿಬ್ಬಂದಿ ನಮ್ಮೊಂದಿಗೆ ಕೆಲಸ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ ಮತ್ತು ಮೇಲಧಿಕಾರಿಗಳ ಸೂಚನೆಯಂತೆ ಕೆಲಸವನ್ನು ನಿರ್ವಹಿಸುತ್ತೇವೆ” ಎಂದು ತಿಳಿಸಿದರು.

ಜೆಎನ್.1 ತಳಿ ವೈರಸ್ ದುರ್ಬಲ – ಆಂಜಿನಪ್ಪ(ದೊಡ್ಡಬಳ್ಳಾಪುರ): ಮತ್ತೊಂದೆಡೆ, ಕೋವಿಡ್​ ರೂಪಾಂತರಿ ಜೆಎನ್.1 ವೈರಸ್ ದುರ್ಬಲವಾದದ್ದು, ಸಂಕ್ರಾಂತಿ ಬಳಿಕ ತಾನಾಗಿಯೇ ಮಾಯವಾಗಲಿದೆ. ಹಾಗಾಗಿ ಜನರು ಆತಂಕಪಡುವ ಅಗತ್ಯವಿಲ್ಲ ಎಂದು ಡಾ. ಆಂಜಿನಪ್ಪ ಹೇಳಿದ್ದಾರೆ. ದೊಡ್ಡಬಳ್ಳಾಪುರದಲ್ಲಿ ಮಾತನಾಡಿದ ಅವರು, ರೂಪಾಂತರಿ ವೈರಸ್ ಬಗ್ಗೆ ಜನ ಆತಂಕಪಡುವ ಅಗತ್ಯವಿಲ್ಲ. ಆದರೆ, 60 ವರ್ಷ ಮೇಲ್ಪಟ್ಟವರು ಮತ್ತು 3 ರಿಂದ 13 ವರ್ಷದ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಹಿಂದಿನ ಅನುಭವದ ಪ್ರಕಾರ ಜನರು ಗುಂಪು ಗುಂಪಾಗಿ ಸೇರಬಾರದು. ಸರ್ಕಾರದ ಗೈಡ್​​ಲೈನ್​ ಪ್ರಕಾರ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸಬೇಕು ಎಂದರು.


Spread the love

About Laxminews 24x7

Check Also

ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ!

Spread the love ಬೆಳಗಾವಿಯ ಡಾಕ್ಟರ್ ಶಿವಸ್ವಾಮಿ ಮುಡಿಗುಂಡ ಅವರಿಗೆ ‘ಕಾಚ್ ಸಮುದಾಯ ಚಾಂಪಿಯನ್ ಪ್ರಶಸ್ತಿ’ ಪ್ರದಾನ! ಸಚಿವ ಶರಣ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ