Breaking News

ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

Spread the love

ಬೆಳಗಾವಿ :ಉತ್ತರ ಕರ್ನಾಟಕದ ಹೆಬ್ಬಾಗಿಲು ಬೆಳಗಾವಿ (Belagavi) ಜಿಲ್ಲೆ. ಈ ಭಾಗದ ಬಡವರಿಗೆ, ರೈತರಿಗೆ ಅನುಕೂಲವಾಗಲಿ ಎನ್ನುವ ನಿಟ್ಟಿನಲ್ಲಿ ಸುವರ್ಣಸೌಧ (Suvarna soudha) ಚಿಂತನೆ ಮಾಡಿದ್ದು ಮಾಜಿ ಸಿಎಂ ಯಡಿಯೂರಪ್ಪನವರು (B S Yediyurappa). ಚಳಿಗಾಲದ ಅಧಿವೇಶನ ಈ ಭಾಗದ ರೈತರಿಗೆ, ಬಡವರಿಗೆ ಅನೂಕೂಲವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ (B Y Vijayendra) ಹೇಳಿದರು.

ಸೋಮವಾರ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಜನತೆ ಈ‌ ಅಧಿವೇಶನದ ಮೇಲೆ ಬಹಳ ನಿರೀಕ್ಷೆಯಿಟ್ಟಿದ್ದಾರೆ‌. ಕಬ್ಬು ಬೆಳೆಗಾರರು ಬಹಳ ನಿರೀಕ್ಷೆಯಲ್ಲಿದ್ದಾರೆ. ಪ್ರತಿಯೊಬ್ಬರು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ರಾಜ್ಯ ಸರಕಾರ ಸಿಹಿ ಸುದ್ದಿ ಕೊಡಲಿ ಎಂದರು.

ಹೊಸ ಸರಕಾರದಿಂದ ಜನರು ಸಾಕಷ್ಟು ನಿರೀಕ್ಷೆಗಳನ್ನು ಮಾಡಿದ್ದರು. ಆದರೆ, ದಿನ ಕಳೆದಂತೆ ಎಲ್ಲ ಹುಸಿಯಾಗಿದೆ. ಅಧಿವೇಶನದ ಮುಖಾಂತರವಾದರೂ ರಾಜ್ಯದ ಜನರ ಸಮಸ್ಯೆಗೆ ಸ್ಪಂದಿಸಲಿ ಎಂದ ವಿಜಯೇಂದ್ರ,
ಸದನದ ಒಳಗೆ ಬಿಜೆಪಿ ವಿರೋಧ ಪಕ್ಷವಾಗಿ ಕೆಲಸ ಮಾಡಲಿದೆ. ಸಮರ್ಥವಾಗಿ ಜನತೆಯ ನಿರೀಕ್ಷೆಯಂತೆ ರಾಜ್ಯದ ಸಮಸ್ಯೆಗಳ ಸದನದಲ್ಲಿ ಪ್ರಸ್ತಾಪ ಮಾಡುತ್ತೇನೆ ಎಂದು ತಿಳಿಸಿದರು.


Spread the love

About Laxminews 24x7

Check Also

ಇನ್ಮುಂದೆ ಆನ್​ಲೈನ್ ಬೆಟ್ಟಿಂಗ್ ನಿಷೇಧ:

Spread the loveಬೆಂಗಳೂರು: ಆನ್​ಲೈನ್ ಬೆಟ್ಟಿಂಗ್ ಹಾಗೂ ಗ್ಯಾಂಬ್ಲಿಂಗ್​ಗೆ ಅಂಕುಶ ಹಾಕಲು ರಾಜ್ಯ ಸರ್ಕಾರ ಹೊಸ ಮಸೂದೆಯನ್ನು ರೂಪಿಸಿದೆ.‌ ಕರ್ನಾಟಕ ಪೊಲೀಸ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ