Breaking News

ಬೆಳಗಾವಿಯ ಸಾಂಬ್ರಾ ಏರ್​ಮನ್​ನಲ್ಲಿ ಅಗ್ನಿವೀರವಾಯುಗಳ ನಿರ್ಗಮನ ಪಥಸಂಚಲನ ಯಶಸ್ವಿ.

Spread the love

ಬೆಳಗಾವಿ: ಬೆಳಗಾವಿಯ ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ ನಿರ್ಗಮನ ಪಥಸಂಚಲನ ಯಶಸ್ವಿಯಾಗಿ ಜರುಗಿತು.

ಅಗ್ನಿವೀರವಾಯುಗಳ ಸಾಹಸ ಪ್ರದರ್ಶನ ಕಂಡು ಕುಟುಂಬಸ್ಥರು ಪುಳುಕಿತರಾದರು.

 ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಅಗ್ನಿವೀರವಾಯುಗಳ‌ ಆಕರ್ಷಕ ಪಥಸಂಚಲನಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಗ್ನಿಪಥ್ ಯೋಜನೆಯಡಿ ಸಾಂಬ್ರಾ ಏರಮನ್ ತರಬೇತಿ ಶಾಲೆಯಲ್ಲಿ 22 ವಾರ 2,127 ಪುರುಷರು, 153 ಮಹಿಳೆಯರು ಸೇರಿದಂತೆ 2,280 ಅಗ್ನಿವೀರವಾಯುಗಳು ತರಬೇತಿ ಪೂರ್ಣಗೊಳಿಸಿದ್ದಾರೆ. ಇಂದು ಅಗ್ನಿವೀರವಾಯುಗಳ ಆಕರ್ಷಕ ಪಥಸಂಚಲನ ಎಲ್ಲರ ಗಮನ ಸೆಳೆಯಿತು. ಅದರಲ್ಲೂ ಅಗ್ನಿಪಥ್ ಯೋಜನೆಯಡಿ ದೇಶದಲ್ಲೆ ತರಬೇತಿ ಪೂರ್ಣಗೊಳಿಸಿದ ಮೊದಲ ಮಹಿಳಾ ತಂಡ ಎಂಬ ಖ್ಯಾತಿಗೆ ಈ ಶಿಬಿರಾರ್ಥಿಗಳು ಪಾತ್ರರಾದರು.

 ಸಾಂಬ್ರಾದ ಏರ್‌ಮನ್ ತರಬೇತಿ ಶಾಲೆಯಲ್ಲಿ ಅಗ್ನಿವೀರವಾಯುಗಳ‌ ಆಕರ್ಷಕ ಪಥಸಂಚಲನಅಗ್ನಿವೀರವಾಯು ಮಹಿಳೆ ಮತ್ತು ಪುರುಷರಿಗೆ ಟ್ರೋಫಿ ವಿತರಣೆ: ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಏರ್‌ ಮಾರ್ಷಲ್‌ ಆರ್. ರಾಧಿಶ್‌ ಈ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದರು. ಬಳಿಕ ತರಬೇತಿ ಸಮಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಅಗ್ನಿವೀರವಾಯು ಮಹಿಳೆಯರು ಮತ್ತು ಪುರುಷರಿಗೆ ಟ್ರೋಫಿ ವಿತರಿಸಿದರು.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ