ಕೇಂದ್ರದಿಂದ ಬಾರದಿರುವ ಅನುದಾನ ಕೇಳುವ ಪೌರುಷ ಬಿಜೆಪಿ ಸಂಸದರಿಗೆ ಇಲ್ಲವೇ? -ರಮೇಶ್ ಬಾಬು
ಕೇಂದ್ರದಿಂದ ಬಾರದಿರುವ ಅನುದಾನ ಕೇಳುವ ಪೌರುಷ ಅವರಿಗೆ ಇಲ್ಲವೇ? ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡೋ ನೀವು ಇದಕ್ಕೆ ಉತ್ತರಿಸಿ ಎಂದು ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.ಅವರು ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ನಡೆದ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ಕಾಂಗ್ರೆಸ್ ವಕ್ತಾರ ರಮೇಶ್ ಬಾಬು ಅವರ ಮಾಧ್ಯಮಗೊಷ್ಟಿಯ ಮುಖ್ಯಾಂಶಗಳು:
ಕರ್ನಾಟಕದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಕರ್ನಾಟಕದಿಂದ ಆಯ್ಕೆಯಾದ 25 ಜನ ಸಂದಸದರು ಜನರ ನಂಬಿಕೆ ಕಳೆದುಕೊಂಡಿದ್ದಾರೆ.
1952 ರಲ್ಲಿ ಮೊದಲನೆ ಸಂಸತ್ ಚುನಾವಣೆಯಲ್ಲಿ ಆಗಿನ ಮೈಸೂರು ರಾಜ್ಯದ 11 ಲೋಕಸಭಾ ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ 10 ಸ್ಥಾನ ಗಳಿಸಿತ್ತು.
1972 ರಲ್ಲಿ 27 ಲೋಕಸಭಾ ಕ್ಷೇತ್ರಗಳ ಪೈಕಿ ಸಂಪೂರ್ಣವಾಗಿ 27 ಲೋಕಸಭಾ ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ತುರ್ತು ಪರಿಸ್ಥಿತಿ ಸಂದರ್ಭದ 1977ರ ಚುನಾವಣೆಯಲ್ಲಿ 26 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಿತ್ತು.
ರಾಮಕೃಷ್ಣ ಹೆಗ್ಡೆ ಅವರ ಹೊಂದಾಣೆಕೆ ಚುನಾವಣೆಯ ಸಂದರ್ಭದಲ್ಲಿ ಲೋಕಸಭೆಯಲ್ಲಿ ಬಿಜೆಪಿ ಕಣ್ತೆರಿಯುವ ಕೆಲಸ ಆರಂಭ ಮಾಡಿತ್ತು. ಕಳೆದ ಚುನಾವಣೆಯಲ್ಲಿ 25 ಸ್ಥಾನ ಪಡೆದಿತ್ತು. ಅದು ಜನರು ನೀಡಿದ ತೀರ್ಪು ಅದಕ್ಕೆ ನಾವು ಗೌರವಿಸಬೇಕು.
ರಾಜ್ಯದಲ್ಲಿ ಭೀಕರ ಬರ ಇದೆ. ರಾಜ್ಯ ಸರ್ಕಾರ ಕೂಡ ಆನೇಕ ಬರ ಪರಿಹಾರ ಕೆಲಸಗಳನ್ನ ಮಾಡುತ್ತಿದೆ. ಕೇಂದ್ರಕ್ಕೆ ಮುಖ್ಯಮಂತ್ರಿ ಸೇರಿದಂತೆ ಅನೇಕೆ ಸಚಿವರು ಬರ ಅಧ್ಯಯನ ತಂಡ ಬೇಕು ಎಂದು ಮನವಿ ನಂತರ ಕೇಂದ್ರ ತಂಡ ಭೇಟಿ ನೀಡಿದೆ.