Breaking News

ಅಂಕ ಗಳಿಕೆಗೆ ಓದುವುದಕ್ಕಿಂತ ಜ್ಞಾನ ಗಳಿಕೆಗೆ ಓದಿ- ಶೆಟ್ಟರ್‌

Spread the love

ಹಿರೇಬಾಗೇವಾಡಿ: ವಿದ್ಯಾರ್ಥಿಗಳು ಧನಾತ್ಮಕ ಚಿಂತನೆ ಮಾಡಬೇಕು. ವಿದ್ಯಾರ್ಥಿ ಜೀವನದಲ್ಲಿ ಯಶಸ್ಸು ಗಳಿಸಲು ತಂದೆ-ತಾಯಿ ಮತ್ತು ಶಿಕ್ಷಕರ ಮಾರ್ಗದರ್ಶನ ಅವಶ್ಯ ಎಂದು ರಾಣೇಬೆನ್ನೂರಿನ ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಅಧ್ಯಕ್ಷ ಹಾಗೂ ಜೀವನ
ಕೌಶಲ್ಯ ತರಬೇತುದಾರ ನಂದೀಶ ಬಿ ಶೆಟ್ಟರ್‌ ಹೇಳಿದರು.

 

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಕರ್ನಾಟಕ ಬಾಲ ವಿಕಾಸ ಅಕಾಡೆಮಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಬೆಳಗಾವಿ ಗ್ರಾಮಾಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ರಾಣೇಬೆನ್ನೂರು ನಂದೀಶ್ವರ ನೈಪುಣ್ಯ ಕೌಶಲ್ಯ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಬಸವ ನಗರದ ಶಿವಾಲಯದ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಎಸ್‌ಎಸ್‌ ಎಲ್‌ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಫಲಿತಾಂಶ ಹೆಚ್ಚಿಸಲು ಸೋಮವಾರ ಏರ್ಪಡಿಸಿದ್ದ ಒಂದು ದಿನದ ವಿಶೇಷ ನೈಪುಣ್ಯ ಕೌಶಲ್ಯ ತರಬೇತಿ ಕಾರ್ಯಕ್ರಮದಲ್ಲಿ ಮುಖ್ಯ ತರಬೇತುದಾರರಾಗಿ ಅವರು ಮಾತನಾಡಿದರು.

ಶಾಲೆಯಲ್ಲಿ ಪ್ರತಿನಿತ್ಯದ ಪಾಠಗಳನ್ನು ಅಂದೇ ಓದಿ, ಬರೆದು ಮತ್ತು ವಿಶ್ಲೇಷಣೆ, ಪುನರಾವರ್ತನೆ ಮಾಡುತ್ತ ಬಂದರೆ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ. ಅಂಕಗಳಿಸುವುದಕ್ಕೋಸ್ಕರ ಕಷ್ಟಪಟ್ಟು ಓದುವುದಕ್ಕಿಂತ ತಮ್ಮ ಜ್ಞಾನದ ಭಂಡಾರವನ್ನು
ಇಮ್ಮಡಿಗೊಳಿಸಲು ಇಷ್ಟಪಟ್ಟು ಓದಿದಾಗ ಎಲ್ಲವೂ ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿ ಸಹ ಇಷ್ಟುಪಟ್ಟು ಓದುವ ಹವ್ಯಾಸವನ್ನು ರೂಢಿಸಿಕೊಳ್ಳಬೇಕೆಂದರು.

ಕೆಪಿಸಿಸಿ ಸದಸ್ಯ ಸುರೇಶ ಇಟಗಿ ಮಾತನಾಡಿ, ಶಿಕ್ಷಕರು ಮಾಡುವ ಪಾಠವನ್ನು ಸರಿಯಾಗಿ ಅಭ್ಯಾಸ ಮಾಡಬೇಕು. ವಿದ್ಯಾರ್ಥಿಗಳು ಪರೀಕ್ಷೆ ಭಯವನ್ನು ಬಿಟ್ಟು ಓದಿನ ಕಡೆ ಹೆಚ್ಚಿನ ಗಮನ ಕೊಟ್ಟರೆ ಉತ್ತಮ ಅಂಕ ಪಡೆಯಲು ಸಾಧ್ಯ ಎಂದು ಹೇಳಿದರು. ಈ ವೇಳೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.


Spread the love

About Laxminews 24x7

Check Also

ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನ

Spread the loveಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ