ಹಂತಕರ ಬಂಧನದ ನಂತರವೇ ರತ್ನಾಬಾಯಿ ಹತ್ಯೆಗೆ ಕಾರಣ ಏನು ಅನ್ನೊದು ತಿಳಿಯಲಿದೆ.ಆ ವೃದ್ದೆ ದೇವರ ಹೆಸರಿನ ಮೇಲೆ ಭವಿಷ್ಯ ಹೇಳ್ತಾ ಜನರ ಕಷ್ಟಕಾರ್ಪಣ್ಯಗಳನ್ನ ದೂರ ಮಾಡುತ್ತ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು. ಆದರೆ ತನ್ನ ಭವಿಷ್ಯದ ಬಗ್ಗೆನೇ ತಿಳಿಯದೇ ಆಕೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದಾಳೆ.. ಮನೆಗೆ ನುಗ್ಗಿದ ಹಂತಕರ ತಂಡ ಒಂಟಿ ವೃದ್ದೆಯನ್ನ ಭೀಕರವಾಗಿ ಕೊಂದು ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ.
ಬರ್ಬರವಾಗಿ ಹತ್ಯೆಯಾಗಿ ಬಿದ್ದಿರೋ ವೃದ್ದೆ.. ಪೊಲೀಸರಿಂದ ಸ್ಥಳ ಪರಿಶೀಲನೆ.. ಮತ್ತೊಂದೆಡೆ ತಮ್ಮವರನ್ನ ಕಳೆದುಕೊಂಡು ರೋಧಿಸುತ್ತಿರೋ ಕುಟುಂಬಸ್ಥರು.. ಅಷ್ಟಕ್ಕೂ ಈ ದೃಶ್ಯಗಳು ಕಂಡು ಬಂದಿದ್ದು ಕಲಬುರಗಿ ನಗರದಲ್ಲಿ.
ಮೇಲಿನ ಫೋಟೊದಲ್ಲಿ ಕಾಣ್ತಾಯಿರೋ ವೃದ್ದೆಯ ಹೆಸರು 65 ವರ್ಷದ ರತ್ನಾಬಾಯಿ ಅಂತ. ಕಲಬುರಗಿಯ ಬಿದನೂರ್ ಗ್ರಾಮದ ನಿವಾಸಿಯಾದ ರತ್ನಾಬಾಯಿ ಕಳೆದ 30 ವರ್ಷಗಳಿಂದ ನಗರದ ಸಂತೋಷ್ ಕಾಲೋನಿಯಲ್ಲಿ ಟಿನ್‌ಶೆಡ್‌ನಲ್ಲಿ ಒಬ್ಬಂಟಿಯಾಗಿ ಜೀವನ ಸಾಗಿಸುತ್ತಿದ್ದಳು.