ಬೆಂಗಳೂರು: ಹಿಂದುಳಿದ ವರ್ಗಗಳ ಆಯೋಗ ನಡೆಸಿದ ಜಾತಿ ಗಣತಿ ಅವೈಜ್ಞಾನಿಕವಾಗಿದ್ದು, ವೈಜ್ಞಾನಿಕವಾಗಿ ಸಮಿಕ್ಷೆಯಾಗಬೇಕು ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪ ಒತ್ತಾಯಿಸಿದ್ದಾರೆ.
ಬೆಂಗಳೂರಿನ ಅಖಿಲ ಭಾರತ ವೀರಶೈವ ಮಹಾಸಭಾ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಜಾತಿ ಜನಗಣತಿ ವರದಿ ಸರಿ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಮನೂರು ಶಿವಶಂಕರಪ್ಪ, ”ಜಾತಿ ಗಣತಿ ಲೋಪದಿಂದ ಕೂಡಿದೆ ಎಂದು ನಾವು ವಿರೋಧ ಮಾಡುತ್ತಿದ್ದೇವೆ. ವರದಿಯಲ್ಲಿ ಏನಿದೆ ಅಂತ ಅದೆಲ್ಲ ಲೀಕ್ ಆಗಿದೆ. ಇದರಲ್ಲಿ ಲಿಂಗಾಯತ ವೀರಶೈವ ಎಂದು ಬರೆದುಕೊಂಡೇ ಇಲ್ಲ. ಅನೇಕ ಲೋಪದೋಷಗಳಿರುವ ಈ ಸಮಿಕ್ಷಾ ವರದಿಗೆ ಎಲ್ಲರ ವಿರೋಧವಿದೆ. ನಾವೂ ಸಹ ಸಿಎಂ ಭೇಟಿ ಮಾಡುತ್ತೇವೆ. ಒಕ್ಕಲಿಗರ ಸಮುದಾಯದ ರೀತಿಯೇ ಸಹಿ ಮಾಡಿ ವಿರೋಧ ವ್ಯಕ್ತಪಡಿಸುತ್ತೇವೆ. ಬಿಜೆಪಿ, ಜೆಡಿಎಸ್ನವರೂ ಸಹ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವರದಿ ಕುರಿತು ಈಗಾಗಲೇ ಮೌಖಿಕವಾಗಿ ಸಿಎಂ ಬಳಿ ಚರ್ಚೆ ನಡೆಸಿದ್ದೇವೆ, ನೋಡೋಣ ಎಂದು ಹೇಳಿದ್ದಾರೆ” ಎಂದರು.
ಮನೆ ಮನೆಗೆ ಹೋಗಿ ಸಮೀಕ್ಷೆ ಮಾಡಿ, ಎಲ್ಲೋ ಕೂತು ಸಮೀಕ್ಷೆ ಮಾಡುವುದಲ್ಲ. ಪ್ರತ್ಯೇಕ ಲಿಂಗಾಯತ ಧರ್ಮ ಅಂತ ಹೋದವರೆಲ್ಲ ಸೋತರು, ಬರಿ ಲಿಂಗಾಯತ ಅಂತ ಹೋದವರೆಲ್ಲ ಮಣ್ಣು ಕಚ್ಚಿದರು. ಮೂಲ ವರದಿ ಕೊಟ್ಟಿದ್ದೀನಿ ಅಂತ ಕಾಂತರಾಜ್ ಹೇಳುತ್ತಿದ್ದಾರೆ. ಆದರೆ ನಾಪತ್ತೆಯಾಗಿದೆ. ಆಯೋಗದ ಅಧ್ಯಕ್ಷರ ಅವಧಿ ವಿಸ್ತರಣೆಯಾಗಿದೆ” ಎಂದರು. ಲೋಕಸಭಾ ಚುನಾವಣೆಗೆ ಜಾತಿ ಜನಗಣತಿ ಹಿನ್ನೆಡೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ”ಈ ಹಿಂದೆ ಪ್ರತ್ಯೇಕ ಧರ್ಮ ವಿಚಾರದಲ್ಲಿ ಆದಂತೆಯೇ 100ರಷ್ಟು ತೊಂದರೆ ಆಗಲಿದೆ” ಎಂದರು.
Laxmi News 24×7