ಸ್ಯಾಂಡಲ್‌ವುಡ್ ಸಂಜು ವೆಡ್ಸ್ ಗೀತಾ ಎರಡನೇ (Sanju Weds Geetha-2) ಭಾಗದ ಶೂಟಿಂಗ್ ಭರದಿಂದ ಸಾಗಿದೆ. ಕನಕಪುರ ರಸ್ತೆಯ ಫಾಮ್ ಹೌಸ್‌ನಲ್ಲಿ ಸಿನಿಮಾ ಶೂಟಿಂಗ್ (Cinema Shooting) ಬಲು ಜೋರಾಗಿಯೇ ನಡೆಯುತ್ತಿದೆ. ಸಿನಿಮಾದ ಮಹತ್ವದ ದೃಶ್ಯವನ್ನ ಇಲ್ಲಿ ತೆಗೆಯಲಾಗುತ್ತಿದೆ.
ಇದರೊಟ್ಟಿಗೆ ಸಿನಿಮಾದ ರಿಲೀಸ್ ಡೇಟ್ ಕೂಡ ರಿವೀಲ್ ಆಗಿದೆ. ಸಿನಿಮಾ ಶೂಟಿಂಗ್ ಹಂತದಲ್ಲಿಯೇ ರಿಲೀಸ್ ದಿನವನ್ನ ಪ್ಲಾನ್ (Release Plan) ಮಾಡಲಾಗಿದೆ. ಇದರ ಬಗ್ಗೆ ನಿರ್ದೇಶಕ ನಾಗಶೇಖರ್ ಈಗಾಗಲೇ ಹೇಳಿಕೊಂಡಾಗಿದೆ. ಸಂಜು ವೆಡ್ಸ್ ಗೀತಾ ಸಿನಿಮಾದ ಸಂಗೀತವೂ ವಿಶೇಷವಾಗಿಯೇ ಬಂದಿವೆ. ಸಾಹಿತ್ಯದ ವಿಚಾರದಲ್ಲೂ ಹೊಸ ಫೀಲ್ ಹುಟ್ಟಿಕೊಂಡಿದೆ. ಸತ್ಯ ಹೆಗಡೆ (Satya Hegde) ಒಳ್ಳೆ ಫೀಲ್‌ನಲ್ಲಿಯೇ ಇದ್ದಾರೆ. ಇವರೆಲ್ಲ ಈ ಚಿತ್ರದ ಒಂದಷ್ಟು ಅಧಿಕೃತ ಮಾಹಿತಿ ಇಲ್ಲಿದೆ .
ಸಂಜು ವೆಡ್ಸ್ ಗೀತಾ-2 ಸಿನಿಮಾದ ರಿಲೀಸ್ ಡೇಟ್ ಫಿಕ್ಸ್
ಸಂಜು ವೆಡ್ಸ್ ಗೀತಾ ಕನ್ನಡದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಮೂಲಕ ರಿಯಲ್ ಘಟನೆಯಗಳನ್ನ ಪ್ರೀತಿ ತುಂಬಿದ ಕಥೆಯಾಗಿ ಉಣಬಡಿಸಿದ ಡೈರೆಕ್ಟರ್ ನಾಗಶೇಖರ್ ಈ ಚಿತ್ರದಲ್ಲಿ ಸಕ್ಸಸ್ ಕಂಡಿದ್ದರು. ಗೀತಾ ಪಾತ್ರದಲ್ಲಿ ರಮ್ಯ ಮನೋಜ್ಞವಾಗಿಯೇ ನಟಿಸಿದ್ರು. ಸಂಜು ಪಾತ್ರಧಾರಿ ಶ್ರೀನಗರ ಕಿಟ್ಟಿ ಇಲ್ಲಿ ತಮ್ಮದೇ ಶೈಲಿಯನ್ನ ಕ್ರಿಯೇಟ್ ಮಾಡಿದ್ದರು.
12 ವರ್ಷದ ಹಿಂದೆ ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸತ್ಯ ಹೆಗಡೆ ಕೆಲಸ!
ಸಂಜು ವೆಡ್ಸ್ ಗೀತಾ ಗೆಲುವು ಹೆನ್ನೆರಡು ವರ್ಷದ ಈ ಚಿತ್ರದ ಎರಡನೇ ಭಾಗದ ಶೂಟಿಂಗ್ ಶುರು ಆಗಿದೆ. ಅದ್ಧೂರಿಯಾಗಿಯೇ ಚಿತ್ರ ಲಾಂಚ್ ಆಗಿದೆ. ಬೆಂಗಳೂರಿನ ಕನಕಪುರ ರಸ್ತೆಯ ಫಾರ್ಮ್ ಹೌಸ್‌ನಲ್ಲಿಯೇ ಈ ಒಂದು ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಈ ಮೂಲಕ ಸಿನಿಮಾ ತಂಡ ತಮ್ಮ ಚಿತ್ರದ ಸದ್ಯದ ಮಾಹಿತಿ ಕೊಟ್ಟಿದೆ.
ಸಂಜು ವೆಡ್ಸ್ ಗೀತಾ-2 ಏಪ್ರಿಲ್ 1 ರಂದು ರಿಲೀಸ್!
ಸಂಜು ವೆಡ್ಸ್ ಗೀತಾ-2 ಚಿತ್ರವನ್ನ ಏಪ್ರಿಲ್-1 ರಂದು ತರಬೇಕು ಅನ್ನೋದು ಪ್ಲಾನ್ ಇದೆ. ಈ ಒಂದು ಟಾರ್ಗೆಟೆಡ್ ಟೈಮ್‌ನಲ್ಲಿಯೇ ಸಿನಿಮಾ ತರೋಕೆ ಒಂದು ಕಾರಣವೂ ಇದೆ. 12 ವರ್ಷದ ಹಿಂದೆ 2011, ಏಪ್ರಿಲ್-1 ರಂದು ಸಂಜು ವೆಡ್ಸ್ ಗೀತಾ ರಿಲೀಸ್ ಆಗಿತ್ತು.