Breaking News

ವಿಧಾನಸಭೆ ಚುನಾವಣೆ: ಮಧ್ಯಪ್ರದೇಶದ 230, ಛತ್ತೀಸ್​ಗಢದ 70 ಕ್ಷೇತ್ರಗಳಿಗೆ ಮತದಾನ

Spread the love

ಭೋಪಾಲ್/ರಾಯಪುರ: ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಇಂದು ಮಹತ್ವದ ದಿನ. ಮಧ್ಯಪ್ರದೇಶದ ಎಲ್ಲ 230 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಹಾಗೂ ಛತ್ತೀಸ್​ಗಢ 70 ಕ್ಷೇತ್ರಗಳಿಗೆ ಅಂತಿಮ ಹಂತದ ಮತದಾನ ಪ್ರಗತಿಯಲ್ಲಿದೆ. ಇದರೊಂದಿಗೆ ಮಿಜೋರಾಂ ಸೇರಿ ಮೂರು ರಾಜ್ಯಗಳ ಮತ ಸಮರಕ್ಕೆ ತೆರೆ ಬೀಳಲಿದೆ. ರಾಜಸ್ಥಾನ (ನ.25) ಹಾಗೂ ತೆಲಂಗಾಣದಲ್ಲಿ (ನ.30) ಮತದಾನ ಇನ್ನಷ್ಟೇ ನಡೆಯಬೇಕಿದೆ.

 

 

ನವೆಂಬರ್​ 7ರಂದು ಮಿಜೋರಾಂನ ಎಲ್ಲ 40 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಶೇ 78ರಷ್ಟು ಮತದಾನವಾಗಿತ್ತು. ಅದೇ ದಿನ ಛತ್ತೀಸ್​ಗಢದ 90 ಸ್ಥಾನಗಳ ಪೈಕಿ 20 ಕ್ಷೇತ್ರಗಳಿಗೆ ಮೊದಲ ಹಂತದ ಮತದಾನವಾಗಿದ್ದು, ಶೇ.71ರಷ್ಟು ಪೋಲಿಂಗ್ ದಾಖಲಾಗಿದೆ. ಇಂದು ಛತ್ತೀಸ್​ಗಢದ 22 ಜಿಲ್ಲೆಗಳ 70 ವಿಧಾನಸಭಾ ಸ್ಥಾನಗಳಲ್ಲಿ ಎರಡನೇ ಹಂತದ ಮತದಾನ ನಡೆಯುತ್ತಿದೆ. ಒಟ್ಟು 1.63 ಕೋಟಿಗೂ ಅಧಿಕ ಮತದಾರರು ಹಕ್ಕು ಚಲಾಯಿಸಲಿದ್ದಾರೆ.

 

 

70 ಕ್ಷೇತ್ರ – 958 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ: ಛತ್ತೀಸ್​ಗಢದ 70 ಕ್ಷೇತ್ರಗಳಲ್ಲಿ 51 ಪಕ್ಷಗಳಿಂದ ಒಟ್ಟು 958 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇದರಲ್ಲಿ 130 ಮಹಿಳಾ ಅಭ್ಯರ್ಥಿಗಳು, ಓರ್ವ ತೃತೀಯಲಿಂಗಿ ಸೇರಿದ್ದಾರೆ. ಆಮ್ ಆದ್ಮಿ ಪಕ್ಷ – 44, ಬಿಎಸ್‌ಪಿ – 44, ಕಾಂಗ್ರೆಸ್‌ – 70, ಬಿಜೆಪಿ – 70, ಜೆಸಿಸಿಜೆ – 67 ಮತ್ತು 357 ಸ್ವತಂತ್ರ ಅಭ್ಯರ್ಥಿಗಳು ಹಾಗೂ 304 ಇತರೆ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ಬರೆಯುವರು. ಬಹುತೇಕ ಕ್ಷೇತ್ರಗಳಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಪೈಪೋಟಿ ಏರ್ಪಟ್ಟಿದೆ.


Spread the love

About Laxminews 24x7

Check Also

ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮ

Spread the love ನವೆಂಬರ 9 ರಂದು ನಡೆಯಲಿರುವ ಗೋಕಾಕ ಹಿಲ್ ಹಾಫ್ ಮ್ಯಾರಥಾನ್ ಕಾರ್ಯಕ್ರಮಕ್ಕೆ ಬೆಳಗಾವಿ ಮರಾಠಾ ಲಘು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ