ನವೆಂಬರ್ 7: ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಂಡ ಸರ್ಕಾರಿ ಅಧಿಕಾರಿಯೊಬ್ಬರ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಇದೀಗ ವೈರಲ್ ಆಗಿದೆ. ಎಲ್ಲೆಡೆ ಲಂಚ, 30 %, 40 % , 45 % ಲಂಚ, ಕಮೀಷನ್ (Corruption) ಎಂಬ ಆರೋಪ-ಪ್ರತ್ಯಾರೋಪಗಳೇ ಕೇಳಿಬರುತ್ತಿರುವ ಈ ಸಂದರ್ಭದಲ್ಲಿ ಮತ್ತು ಅನಾದಿ ಕಾಲದಿಂದಲೂ ಸರ್ಕಾರಿ ಕಛೇರಿಗಳಲ್ಲಿ ಲಂಚ (Bribe) ಇಲ್ಲದೆ ಏನೂ ಕೆಲಸ ಆಗಲ್ಲ, ಒಂದೇ ಒಂದು ಕಡತ ಅಲುಗಾಡಲ್ಲ ಎನ್ನೋ ನೋವು ಜನರಲ್ಲಿ ಬೇರೂರಿದೆ.
ಈ ಲಂಚಾಸುರಗಳ ಹಾವಳಿಯ ಮಧ್ಯೆ ಹಾಸನದ ಬಿಇಒ ಕಛೇರಿಯ ಅಧೀಕ್ಷಕ ಡಿಎಸ್ ಲೋಕೇಶ್ (Hasan BEO Superintendent) ಅವರು ತಮ್ಮ ಟೇಬಲ್ ಮೇಲೆ ನಾನು ಭ್ರಷ್ಟನಲ್ಲ, ಇಲ್ಲಿ ಲಂಚ ಸ್ವೀಕರಿಸುವುದಿಲ್ಲ ಎಂದು ಬೋರ್ಡ್ ಹಾಕಿಕೊಳ್ಳುವ ಮೂಲಕ ಪ್ರಾಮಾಣಿಕತೆ (Honesty) ಮೆರೆಯುತ್ತಿದ್ದಾರೆ.
Laxmi News 24×7