ಕರುನಾಡು ರಕ್ಷಣಾ ವೇದಿಕೆ ವತಿಯಿಂದ ಗೋಕಾಕದಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಣೆ

Spread the love

ಗೋಕಾಕ : ನಗರದಲ್ಲಿ ಕರುನಾಡು ರಕ್ಷಣಾ ವೇದಿಕೆ ವತಿಯಿಂದ ಕರ್ನಾಟಕ ರಾಜ್ಯೋತ್ಸವ ವತಿಯಿಂದ ಕರ್ನಾಟಕ ರಾಜ್ಯೋತ್ಸವ ಆಚರಣೆ ಮಾಡಿದರು.

ಕನ್ನಡ ತಾಯಿ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಶ್ರೀ ಶೂನ್ಯ ಸಂಪಾದನಮಠದ ಶ್ರೀ ಮುರುಘರಾಜೇಂದ್ರ ಸ್ವಾಮೀಜಿ ಅವರು ಚಾಲನೆ ನೀಡಿದರು.

ನಗರದ ಕೊಳವಿ ಹಣಮಂತ ದೇವಸ್ಥಾನದಿಂದ ಬಸವೇಶ್ವರ ವೃತ್ತದವರೆಗೆ ಮೆರವಣಿಗೆ ನಡೆದಿದ್ದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ, ಮಹರ್ಷಿ ವಾಲ್ಮೀಕಿಯವರ, ಡಾ. ಬಿ ಆರ್ ಅಂಬೇಡ್ಕರ್ ಅವರ, ಛತ್ರಪತಿ ಶಿವಾಜಿ ಮಹಾರಾಜರ, ಮಹರ್ಷಿ ಭಗೀರಥ ಶ್ರೀಗಳ ಮೂರ್ತಿಗಳು ಗಮನ ಸೆಳೆದವು.ನಂತರ ಗೋಕಾಕ ಸಭಾ ಭವನದಲ್ಲಿ ಕಾರ್ಯಕ್ರಮ ಜರಗಿತು.

ಈ ಸಂದರ್ಭದಲ್ಲಿ ರಾಮಚಂದ್ರ ಕಾಕಡೆ ಅವರು ಮಾತನಾಡಿ
ನಮ್ಮ ಗೋಕಾಕದಲ್ಲಿ ಈ ಬಾರಿ ರಾಜ್ಯೋತ್ಸವ ಆಚರಣೆಯನ್ನು ಕರುನಾಡ ರಕ್ಷಣಾ ವೇದಿಕೆ ಮಾಡಿದೆ. ಕರದಂಟು ನಾಡಲ್ಲಿ ಕನ್ನಡ ಧ್ವಜವನ್ನು ಕರುನಾಡ ರಕ್ಷಣಾ ವೇದಿಕೆ ಎತ್ತಿ ಹಿಡಿದಿದೆ. ಅದರಲ್ಲೂ ಮಹಾತ್ಮರ ಮೂರ್ತಿಗಳಿಗೆ ಗೌರವ ಸಲ್ಲಿಸಿದ್ದು ಅತ್ಯುತ್ತಮ ಕಾರ್ಯವಾಗಿದೆ. ಇಡೀ ದೇಶದಲ್ಲಿ ಎರಡು ಸಂಗೀತ ಶಾಸ್ತ್ರಗಳು ಅದರಲ್ಲಿ ಕನ್ನಡ ಸಂಗೀತ ಶಾಸ್ತ್ರ ಕೂಡ ಒಂದು, ದೇಶದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ನಮ್ಮ ಕನ್ನಡ ಭಾಷೆಗೆ ದೊರಕಿದೆ ಇದು ನಮ್ಮ ಭಾಷೆಯ ಹೆಮ್ಮೆ ಎಂದರು.

ನಂತರ ಸುನೀಲ್ ಅವರು ಮಾತನಾಡಿ ಸಂಘಟನೆಗಳು ಬೇರೆ ಬೇರೆ ಆಗಿದ್ದರೂ ಸಹಿತ ಉದ್ದೇಶ ಒಂದೇ ಆಗಿರುತ್ತದೆ, ನಾಡು ನೆಲ ಜಲ ಸಂರಕ್ಷಣೆ ಮಾಡುವುದು, ಭಾಷೆ ಬೆಳೆಸುವುದು ನಾಡಿಗಾಗಿ ಒಗ್ಗಟ್ಟಾಗಿ ಹೋರಾಟ ಮಾಡೋಣ. ಸಂಘಟನೆಯನ್ನು ಮತ್ತಷ್ಟು ಬೆಳೆಸೋಣ ಎಂದು ತಿಳಿಸಿದರು.
ನಂತರ ಪದಾಧಿಕಾರಿಗಳಿಗೆ ಸತ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ರಾಜ್ಯಾಧ್ಯಕ್ಷರಾದ ಮಲ್ಲಿಕಾರ್ಜುನ ಮರಕುಂಬಿ, ಬಾಳಗೌಡ ಇಂಚಲ , ಸುರೇಶ್ ಹಡೀಗಿನಾಳ, ನಿಂಗಪ್ಪಾ ಬಾಲದಂಡಿ, ಈರಯ್ಯ ಪೂಜಾರಿ, ಸತೀಶ್ ನಾಯ್ಕ್, ಬಸವರಾಜ್ ಇಳಿಗೇರ, ಬಾಲಚಂದ್ರ ಬಣವಿ,ಲಕ್ಕಪ್ಪಾ ನಂದಿ, ರಾಮೋಜಿ ದ್ಯಾಗಾನಟ್ಟಿ, ನಿಂಗಪ್ಪಾ, ಬಾಬು ಕೊಡಗನ್ನವರ, ಮಂಜುನಾಥ ಜಲ್ಲಿ ಹಾಗೂ ಅನೇಕ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಸಾವಿರಾರು ಯುವಕರು , ಮಹಿಳೆಯರು, ಸಂಘಟನೆಯ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.


Spread the love

About Laxminews 24x7

Check Also

3 ವರ್ಷದ ಬಾಲಕಿಯ ಅಪಹರಣ,ಗಲ್ಲು ಶಿಕ್ಷೆ ವಿಧಿಸಿ ನ್ಯಾಯಾಲಯ

Spread the loveಬೆಳಗಾವಿ ಜಿಲ್ಲೆಯ ಹಾರೂಗೇರಿಯಲ್ಲಿ 7 ವರ್ಷಗಳ ಹಿಂದೆ ನಡೆದಿದ್ದ 3 ವರ್ಷದ ಬಾಲಕಿಯ ಅಪಹರಣ, ಅತ್ಯಾಚಾರ ಮತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ