ನೆದರ್ಲೆಂಡ್ಸ್-ಅಫ್ಘಾನಿಸ್ತಾನ ಮಧ್ಯೆ ಇಂದು ಪೈಪೋಟಿ; ಟಾಸ್​ ಗೆದ್ದ ಡಚ್ ಟೀಂ ಬ್ಯಾಟಿಂಗ್

Spread the love

ಲಖನೌ(ಉತ್ತರಪ್ರದೇಶ): ಐಸಿಸಿ ವಿಶ್ವಕಪ್ ಕ್ರಿಕೆಟ್ 2023ರ 34ನೇ ಪಂದ್ಯ ನೆದರ್ಲ್ಯೆಂಡ್ಸ್ ಮತ್ತು ಅಫ್ಘಾನಿಸ್ತಾನ ನಡುವೆ ಇಂದು ಲಖನೌದ ಏಕಾನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ.

ಟಾಸ್​ ಗೆದ್ದ ನೆದರ್ಲೆಂಡ್ಸ್ ಬ್ಯಾಟಿಂಗ್​ ಆಯ್ದುಕೊಂಡಿತು.

ನೆದರ್ಲೆಂಡ್ಸ್ ತಂಡದಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ. ವಿಕ್ರಮಜೀತ್ ಬದಲಿಗೆ ಬ್ಯಾರೆಸಿ ಸ್ಥಾನ ಪಡೆದಿದ್ದಾರೆ. ನಾಲ್ವರು ಸ್ಪಿನ್ನರ್‌ಗಳೊಂದಿಗೆ ಅಫ್ಘಾನಿಸ್ತಾನ ಮೈದಾನಕ್ಕಿಳಿಯಲಿದೆ.

ಎರಡೂ ತಂಡಗಳು ಏಕದಿನ ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಪ್ರಸಕ್ತ ಟೂರ್ನಿಯಲ್ಲಿ ಇತ್ತಂಡಗಳಿಗೂ ಇದು 7ನೇ ಪಂದ್ಯ. ಹಶ್ಮತುಲ್ಲಾ ಶಾಹಿದಿ ನೇತೃತ್ವದ ಟೀಂ ಇದುವರೆಗೆ ಮೂರು ಪಂದ್ಯ ಗೆದ್ದಿದ್ದು, ಇಂದು ನಾಲ್ಕನೇ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಅಫ್ಘಾನಿಸ್ತಾನವು ಹಾಲಿ ಚಾಂಪಿಯನ್ ಇಂಗ್ಲೆಂಡ್, ಪಾಕಿಸ್ತಾನ ಮತ್ತು ಶ್ರೀಲಂಕಾವನ್ನೂ ಸೋಲಿಸಿ ಗಮನ ಸೆಳೆದಿದೆ.

ಪಾಯಿಂಟ್ ಪಟ್ಟಿಯಲ್ಲಿ ಅಫ್ಘಾನಿಸ್ತಾನ ಆರನೇ ಸ್ಥಾನದಲ್ಲಿದ್ದು, ಸೆಮಿಫೈನಲ್ ರೇಸ್‌ನಲ್ಲಿದೆ. ಈ ತಂಡದ ಖಾತೆಯಲ್ಲಿ 6 ಅಂಕಗಳಿವೆ. ಸ್ಕಾಟ್ ಎಡ್ವರ್ಡ್ಸ್ ನೇತೃತ್ವದ ನೆದರ್ಲೆಂಡ್ಸ್‌ ನಾಲ್ಕು ಅಂಕಗಳೊಂದಿಗೆ ಎಂಟನೇ ಸ್ಥಾನದಲ್ಲಿದೆ. ಏಕಾನಾ ಪಿಚ್‌ನಲ್ಲಿ ಅಫ್ಘಾನಿಸ್ತಾನದ ಅತ್ಯುತ್ತಮ ಸ್ಪಿನ್ ದಾಳಿ ಎದುರಿಸುವುದು ನೆದರ್ಲೆಂಡ್ಸ್‌ಗೆ ಸುಲಭವಲ್ಲ. ಎರಡೂ ತಂಡಗಳ ನಡುವೆ 9 ಏಕದಿನ ಪಂದ್ಯಗಳು ನಡೆದಿವೆ. ಈ ಪಂದ್ಯಗಳಲ್ಲಿ ಅಫ್ಘಾನಿಸ್ತಾನ 7 ಬಾರಿ ಗೆದ್ದಿದ್ದರೆ, ನೆದರ್ಲೆಂಡ್ಸ್ ಎರಡು ಬಾರಿ ಗೆದ್ದಿದೆ.

ವಿಕೆಟ್ ಕೀಪರ್ ಇಕ್ರಮ್ ಅಲಿಖಿಲ್ ಗಾಯಗೊಂಡಿದ್ದು ರಹಮಾನುಲ್ಲಾ ಗುರ್ಬಾಜ್ ಕಳೆದ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ ಮಾಡಬೇಕಾಯಿತು. ಆದರೆ, ತಂಡಕ್ಕೆ ಸಂತಸದ ಸುದ್ದಿ ಏನೆಂದರೆ, ಇಕ್ರಮ್ ಅವರ ಗಾಯ ಗಂಭೀರವಾಗಿಲ್ಲ. ಇಂದಿನ ಪಂದ್ಯದಲ್ಲಿ ಅವರು ಆಡಲಿದ್ದಾರೆ ಎಂದು ಕೋಚ್ ಜೊನಾಥನ್ ಟ್ರಾಟ್ ಖಚಿತಪಡಿಸಿದ್ದರು. ಏಕದಿನ ಕ್ರಿಕೆಟ್‌ನಲ್ಲಿ ಸ್ಪಿನ್ ವಿರುದ್ಧ ಸ್ಕಾಟ್ ಎಡ್ವರ್ಡ್ಸ್ ಸರಾಸರಿ 65.92 ಆಗಿದೆ. ಅವರು 794 ಎಸೆತಗಳಲ್ಲಿ 791 ರನ್ ಗಳಿಸಿದ್ದಾರೆ.


Spread the love

About Laxminews 24x7

Check Also

ದೀಪಾವಳಿ ಬಳಿಕ ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಸಾಧ್ಯತೆ

Spread the love ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ದೀಪಾವಳಿ ಹಬ್ಬದ ಬಳಿಕ ಮತ್ತು ನವೆಂಬರ್‌ 26ರ ಮುನ್ನ ನಡೆಯುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ