ಬೆಳಗಾವಿ: ಕರ್ನಾಟಕ ರಾಜ್ಯೋತ್ಸವದಂದು ಕರಾಳ ದಿನಾಚರಿಸಿ, ನಾಡದ್ರೋಹಿ ಘೋಷಣೆಗಳನ್ನು ಕೂಗಿದ ಮಹಾರಾಷ್ಟ್ರ ಏಕೀಕಕರಣ ಸಮಿತಿಯ (ಎಂಇಎಸ್) 18 ಸದಸ್ಯರ ವಿರುದ್ಧ ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಿಲ್ಲಾಡಳಿತದಿಂದ ಎಂಇಎಸ್ ಕರಾಳ ದಿನಾಚರಣೆಗೆ ಅನುಮತಿ ನಿರಾಕರಿಸಲಾಗಿತ್ತು. ಅನುಮತಿ ಇಲ್ಲದೇ ಇದ್ದರೂ ಕೂಡ ನಗರದಲ್ಲಿ ಕರಾಳ ದಿನ ಹೆಸರಲ್ಲಿ ಮೆರವಣಿಗೆ ಮಾಡಿ ಬೆಳಗಾವಿ, ಬೀದರ್, ಭಾಲ್ಕಿ, ನಿಪ್ಪಾಣಿ, ಕಾರವಾರ ಸಂಯುಕ್ತ ಮಹಾರಾಷ್ಟ್ರ ಎಂದು ಘೋಷಣೆ ಕೂಗಿದ್ದರು.
ಎಂಇಎಸ್ ಕೃತ್ಯವನ್ನು ಗಂಭೀರವಾಗಿ ಪರಿಗಣಿಸಿದ್ದ ನಗರ ಪೊಲೀಸರು, ಎಂಇಎಸ್‌ನ ಮಾಳೋಜಿರಾವ್ ಅಷ್ಟೇಕರ್, ಮಾಜಿ ಶಾಸಕ ಮನೋಹರ ಕಿಣೇಕರ್, ರಂಜಿತ್ ಚವ್ಹಾಣಪಾಟೀಲ, ಸರಿತಾ ಪಾಟೀಲ, ಸಾರಿಕಾ ಪಾಟೀಲ, ಅಮರ ಯಳ್ಳೂರಕರ್, ಪ್ರಕಾಶ ಮರಗಾಳೆ ರವಿ ಸಾಳುಂಕೆ, ಅಂಕುಶ ಕೇಸರಕರ್ ಸೇರಿದಂತೆ 18 ಜನರ ವಿರುದ್ಧ ಕೇಸ್ ದಾಖಲಿಸಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ