Breaking News

ವಿಜಯ ದಶಮಿ ಹಬ್ಬದಂದೇ ಯುವಕನನ್ನು ಕೊಚ್ಚಿ‌ ಕೊಲೆ

Spread the love

ಹುಬ್ಬಳ್ಳಿ: ವಿಜಯ ದಶಮಿ ಹಬ್ಬದಂದೇ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನೆತ್ತರು ಹರಿದಿದೆ. ಮಾರಕಾಸ್ತ್ರಗಳಿಂದ ಯುವಕನನ್ನು ಕೊಚ್ಚಿ‌ ಕೊಲೆ ಮಾಡಲಾಗಿದೆ.

ಹುಬ್ಬಳ್ಳಿಯ ಹೊರವಲಯದ ಶಿವಳ್ಳಿ ರೈಲ್ವೆ ಬ್ರಿಡ್ಜ್ ಬಳಿ ಘಟನೆ ನಡೆದಿದೆ. ಮೃತನ ಗುರುತು ಪತ್ತೆಯಾಗಿಲ್ಲ.‌ ಸುಮಾರು 30 ವರ್ಷದ ಯುವಕ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕನ ಕುತ್ತಿಗೆ, ಮುಖ ಹಾಗೂ ದೇಹದ ಹಲವೆಡೆ ಗಾಯಗಳಿವೆ. ಸ್ಥಳಕ್ಕೆ ಡಿಸಿಪಿ, ಎಸಿಪಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಲಾರದಲ್ಲಿ ಕಾಂಗ್ರೆಸ್​ ಮುಖಂಡನ ಕೊಲೆ: ಕೋಲಾರದ ಹೊಗಳಗೆರೆ ರಸ್ತೆಯಲ್ಲಿರುವ ತೋಟದ ಸಮೀಪ ಕಾಂಗ್ರೆಸ್​ನ ಸ್ಥಳೀಯ ಪ್ರಭಾವಿ ಮುಖಂಡ ಶ್ರೀನಿವಾಸ್​ ಎಂಬವರನ್ನು ಸೋಮವಾರ ಭೀಕರವಾಗಿ ಅಪರಿಚಿತರ ಗುಂಪೊಂದು ಹತ್ಯೆ ಮಾಡಿ ಪರಾರಿಯಾಗಿತ್ತು. ಈ ಸಂದರ್ಭದಲ್ಲಿ ಅಲ್ಲೇ ಇದ್ದ ಶ್ರೀನಿವಾಸ್ ಅವರ ಸಹಾಯಕ ಅಮರ್​ ಹಾಗೂ ಕೃಷ್ಣಪ್ಪ ಎಂಬವರ ಮೇಲೂ ದುಷ್ಕರ್ಮಿಗಳು ಹಲ್ಲೆಗೆ ಮುಂದಾಗಿದ್ದು, ಇಬ್ಬರೂ ತಪ್ಪಿಸಿಕೊಂಡಿದ್ದರು.


Spread the love

About Laxminews 24x7

Check Also

ಬೆಂಗಳೂರಿನಿಂದ ಹೊರಡುವ ವಿಶೇಷ ಎಕ್ಸ್​​ಪ್ರೆಸ್ ರೈಲು ಸೇವೆ ವಿಸ್ತರಣೆ

Spread the love ಹುಬ್ಬಳ್ಳಿ: ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಭಾಯಿಸಲು, ನೈಋತ್ಯ ರೈಲ್ವೆಯು ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ