Breaking News

ಧಾರವಾಡ ವಿವಿಯಿಂದ ನೇಮಕಾತಿ: 14 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Spread the love

ರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ವ್ಯಾಪ್ತಿಯ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳಿಗೆ ಈ ನೇಮಕಾತಿ ನಡೆಯಲಿದೆ.

ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಮಾಧ್ಯಮಿಕ ಶಾಲೆಗಳಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಸಹಾಯಕ ಶಿಕ್ಷಕರು ಸೇರಿದಂತೆ ಒಟ್ಟು 14 ಹುದ್ದೆಗಳಿವೆ.

 ಅಧಿಸೂಚನೆಹುದ್ದೆಗಳ ವಿವರ:

  • ಸಹಾಯಕ ಶಿಕ್ಷಕರು- 9
  • ಸಂಗೀತ ಶಿಕ್ಷಕ- 1
  • ಸಹಾಯಕ ಹೌಸ್​ ಮಾಸ್ಟರ್​ ಹಾಗು ಸಹಾಯಕ ಶಿಕ್ಷಕ- 1
  • ಸಹಾಯಕ ಹೌಸ್​ ಮಾಸ್ಟರ್- 1
  • ಸಹಾಯಕ ಶಿಕ್ಷಕರು- 2

ವಿದ್ಯಾರ್ಹತೆ:

  • ಸಹಾಯಕ ಶಿಕ್ಷಕರು- ಸ್ನಾತಕೋತ್ತರ ಪದವಿ, ಬಿ.ಎಡ್​
  • ಸಂಗೀತ ಶಿಕ್ಷಕ- ಸಂಗೀತದಲ್ಲಿ ಸ್ನಾತಕೋತ್ತರ ಪದವಿ
  • ಸಹಾಯಕ ಹೌಸ್​ ಮಾಸ್ಟರ್​ ಕಂ ಸಹಾಯಕ ಶಿಕ್ಷಕ- ಸ್ನಾತಕೋತ್ತರ ಪದವಿ, ಬಿಎಡ್
  • ಸಹಾಯಕ ಹೌಸ್​ ಮಾಸ್ಟರ್​ – ವಿಜ್ಞಾನದಲ್ಲಿ ಪದವಿ ಬಿಎಡ್​​
  • ಸಹಾಯಕ ಶಿಕ್ಷಕರು- ಪಿಯುಸಿ, ಡಿಎಲ್​ಎಡ್​​, ಡಿ.ಎಡ್​

ವಯೋಮಿತಿ: ಗರಿಷ್ಠ ವಯೋಮಿತಿ 42 ವರ್ಷ. ಪ್ರವರ್ಗ 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ 3 ವರ್ಷ, ಪ.ಜಾ, ಪ. ಪಂ, ಪ್ರವರ್ಗ 1, ವಿಶೇಷಚೇತನ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ವಿಶ್ವವಿದ್ಯಾಲಯದ ಅಧಿಕೃತ ಜಾಕಲತಾಣದಿಂದ ನಿಗದಿತ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿ ಜತೆಗೆ ಇನ್ನಿತರ ಅಗತ್ಯ ದಾಖಲಾತಿ ಮತ್ತು ಅರ್ಜಿ ಶುಲ್ಕದ ರಶೀದಿಯನ್ನು ಕೆಳಗಿನ ವಿಳಾಸಕ್ಕೆ ಪೋಸ್ಟ್​ ಅಥವಾ ನೇರವಾಗಿ ಸಲ್ಲಿಸಬಹುದು. ಸಾಮಾನ್ಯ ಅಭ್ಯರ್ಥಿಗಳಿಗೆ 1,250 ರೂ ಅರ್ಜಿ ಶುಲ್ಕ ಮತ್ತು ಪರಿಶಿಷ್ಟ ಜಾರಿ, ಪರಿಶಿಷ್ಟ, ಪ್ರವರ್ಗ 1 ಮತ್ತು ವಿಶೇಷಚೇತನ ಅಭ್ಯರ್ಥಿಗಳು 625 ರೂ ಅರ್ಜಿ ಶುಲ್ಕ ಭರಿಸಬೇಕಿದೆ.

ಅರ್ಜಿ ಸಲ್ಲಿಕೆ ವಿಳಾಸ: ಕುಲ ಸಚಿವರು, ಸಿಆಸು ವಿಭಾಗ, ಕರ್ನಾಟಕ ವಿಶ್ವವಿದ್ಯಾಲಯ, ಪಾವಟಿನಗರ, ಧಾರವಾಡ- 580003.

ಆಯ್ಕೆ ಪ್ರಕ್ರಿಯೆ: ಮೆರಿಟ್​​, ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ನವೆಂಬರ್​ 18ಕ್ಕೆ ಮೊದಲು ಅರ್ಜಿ ಸಲ್ಲಿಸಬೇಕಿದೆ. ಹೆಚ್ಚಿನ ಮಾಹಿತಿಗೆ kud.ac.in ಈ ಜಾಲತಾಣಕ್ಕೆ ಭೇಟಿ ನೀಡಿ.


Spread the love

About Laxminews 24x7

Check Also

ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಸೌರಶಕ್ತಿ ಬಲ

Spread the loveಹುಬ್ಬಳ್ಳಿ: ವಾಣಿಜ್ಯ ‌ನಗರಿ ಹುಬ್ಬಳ್ಳಿ ವಿಮಾನ ‌ನಿಲ್ದಾಣ ಅಂತಾರಾಷ್ಟ್ರೀಯ ಮಟ್ಟದ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ‌. ಇದರ ಭಾಗವಾಗಿ ಹುಬ್ಬಳ್ಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ